Tuesday, October 15, 2024

Latest Posts

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹ*ತ್ಯೆಗೆ ಶರಣು

- Advertisement -

Bollywood News: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡದ 6ನೇ ಮಹಡಿಯಿಂದ ಬಿದ್ದು, ಮಲೈಕಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಅರ್ಬಾಜ್ ಖಾನ್ ಜೊತೆ ಡಿವೋರ್ಸ್ ಆದ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಮಲೈಕಾ ಮತ್ತು ಅರ್ಬಾಜ್‌ಗೆ ಓರ್ವ ಮಗನೂ ಇದ್ದ. ಆದರೆ ಕೆಲ ತಿಂಗಳ ಹಿಂದೆ ಅರ್ಜುನ್ ಕಪೂರ್ ಜೊತೆಗೂ ಬ್ರೇಕಪ್ ಮಾಡಿಕೊಂಡಿದ್ದಾರೆಂದು ಸ್ಪಷ್ಟನೆ ಸಿಕ್ಕಿತ್ತು. ನಿನ್ನೆಯೂ ಮಲೈಕಾ ಈ ಬಗ್ಗೆ ರಹಸ್ಯವಾಗಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಅದು ಇವರಿಬ್ಬರ ಬ್ರೇಕಪ್ ಬಗ್ಗೆ ಇತ್ತು.

ಈ ಮಧ್ಯೆ ಅಪ್ಪನ ಸಾವಿನ ಸುದ್ದಿ ಮಲೈಕಾಗೆ ಶಾಕ್ ನೀಡಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ, ಮಲೈಕಾ ಮಾಜಿ ಪತಿ, ಅರ್ಬಾಜ್ ಖಾನ್ ಸೇರಿ ಬಾಲಿವುಡ್ ಗಣ್ಯರು ಸ್ಥಳಕ್ಕೆ ಆಗಮಿಸಿದ್ದಾರೆ. ಅನಿಲ್ ಅರೋರಾ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ.

- Advertisement -

Latest Posts

Don't Miss