Friday, March 14, 2025

Latest Posts

ಮಹಿಳೆಯರಿಗೆ ಹೆದರಿ ದೇಶ ಬಿಟ್ಟು ಹೋಗಿದ್ದ ಬಾಲಿವುಡ್ ಗ್ಲಾಮರ್ ಗೊಂಬೆ…!

- Advertisement -

www.karnatakatv.net: ಬಾಲಿವುಡ್ ನ ಮರ್ಡರ್ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದ ಮಲ್ಲಿಕಾ ಶೆರಾವತ್ ಪಡ್ಡೇ ಹೈಕಳ ಕನಸಿನ ರಾಣಿಯಾಗಿ ಮೆರೆದಿದ್ರು. ತಮ್ಮ ಬೆಡಗು ಬಿನ್ನಾಣಗಳಿಂದಲೇ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರೋ ಮಲ್ಲಿಕಾ ಅದ್ಯಾಕೋ ಕೆಲ ವರ್ಷಗಳಿಂದ ನಟನೆಗೆ ಬ್ರೇಕ್ ನೀಡಿದ್ರು. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸ್ತಿದ್ದ ಮಲ್ಲಿಕಾ ಇದ್ದಕ್ಕಿದ್ದಂತೆ ದೇಶವನ್ನೇ ಬಿಟ್ಟು ಹೋಗೋ ಪರಿಸ್ಥಿತಿ ಬಂತು.

ಹೌದು, ಬಾಲಿವುಡ್ ನಲ್ಲಿ ತಮ್ಮದೇ ಚಾಪು ಮೂಡಿಸಿಕೊಂಡಿರೋ ಈ ನಟಿಗೆ ತನ್ನ ಬೋಲ್ಡ್ ಪಾತ್ರಗಳೇ ಕಿರಿಕಿರಿಯುಂಟು ಮಾಡ್ತು. ತಮ್ಮ ಕೆರಿಯರ್ ನಲ್ಲಿ ಎಂಥಾದ್ದೇ ಪಾತ್ರವನ್ನಾದ್ರೂ ಮಾಡ್ತೀನಿ ಅಂತ ಚಾಲೆಂಜಿಂಗ್ ರೋಲ್ ಗಳನ್ನ ಮಾಡೋದಕ್ಕೆ ಮಲ್ಲಿಕಾ ರೆಡಿಯಾಗಿದ್ರು. ಹಾಗಂತ ಮೈಚಳಿ ಬಿಟ್ಟು ಆಕ್ಟಿಂಗ್ ಮಾಡೋದು ಸುಲಭದ ಕೆಲಸವೇನಲ್ಲ.  ಹೇಗೋ ಕಷ್ಟಪಟ್ಟು ತಮ್ಮೆಡೆ ಬಂದ ರೋಲ್ ಗಳಲ್ಲಿ ಅತ್ಯದ್ಬುತವಾಗಿ ನಟಿಸಿದ್ರು. ಇದಕ್ಕೆ ಇಮ್ರಾನ್ ಹಾಶ್ಮಿ ಜೊತೆ ಮರ್ಡರ್ ಸಿನಿಮಾದಲ್ಲಿ ನಟಿಸಿದ ಪಾತ್ರವೇ ಸಾಕ್ಷಿ.

ಹೌದು, ಮರ್ಡರ್ ಚಿತ್ರದಿಂದ ಬಾಲಿವುಡ್ ನಲ್ಲಿ ಮಲ್ಲಿಕಾ ಶೆರಾವತ್ ಗೆ ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ರೋಲ್ ಗಳ ಆಫರ್ ಬರಲು ಶುರುವಾಯ್ತು. ಎಲ್ಲಾ ಸಿನಿಮಾಗಳಲ್ಲಿ ಮಲ್ಲಿಕಾ ಆಕ್ಟಿಂಗ್ ಗೆ ಪುರುಷ ಫ್ಯಾನ್ಸ್ ಗಳು ಫಿದಾ ಆಗೇಬಿಟ್ಟಿದ್ರು. ಇದು ದೇಶಾದ್ಯಂತ ಹೆಣ್ಣು ಮಕ್ಕಳ ಕೆಂಗಣ್ಣಿಗೆ ಕಾರಣವಾಯ್ತು. ಇಂಥಹಾ ರೋಲ್ ಗಳಲ್ಲಿ ನಟಿಸೋ ಮಲ್ಲಿಕಾ ಶೆರಾವತ್ ರನ್ನ ಮಹಿಳೆಯರು ಟಾರ್ಗೆಟ್ ಮಾಡಿದ್ರಂತೆ. ಬಿಕಿನಿ ತೊಟ್ಟು, ನಾಚಿಗೆ ಬಿಟ್ಟು ಕುಣಿತಾಳೆ ಎಂದೆಲ್ಲಾ ಮಹಿಳೆಯರು ಕಮೆಂಟ್ ಮಾಡಿದ್ರಂತೆ. ಹೀಗಂತ ಸಂದರ್ಶನವೊಂದರಲ್ಲಿ ಹೇಳಿರೋ ನಟಿ ಮಲ್ಲಿಕಾ,

ನನ್ನ ರೋಲ್ ಗಳಿಗೆ ಪುರುಷರು ಬೆಂಬಲಿಸಿದ್ರು.ಆದ್ರೆ ಈ ರೀತಿಯೆಲ್ಲಾ ಕಮೆಂಟ್ ಮಾಡೋ ಮೂಲಕ ಮಹಿಳೆಯರು ಕಿರುಕುಳ ನೀಡಿದರು.ಆದ್ರೆ ಅವರೆಲ್ಲಾ ಯಾಕೆ ನನ್ನನ್ನು ದ್ವೇಷಿಸುತ್ತಿದ್ದರು ಅನ್ನೋದೇ ನನಗೆ ಅರ್ಥವಾಗಲಿಲ್ಲ. ಇದೆಲ್ಲದರಿಂದ ಬೇಸತ್ತು ನಾನು ದೇಶ ಬಿಟ್ಟು ಹೋಗಲು ನಿರ್ಧರಿಸಿದೆ. ಆದ್ರೆ ಕಾಲಕ್ಕೆ ಎಲ್ಲವನ್ನೂ ಬದಲಿಸೋ ಶಕ್ತಿಯಿದೆ. ಸದ್ಯ ಎಲ್ಲರೂ ನನ್ನನ್ನು ಒಪ್ಪಿಕೊಂಡಿದ್ದಾರೆ ಅಂತ ಮಲ್ಲಿಕಾ ಹೇಳಿದ್ದಾರೆ.

ಇನ್ನು ರಾತ್ರೋ ರಾತ್ರಿ ಸ್ಟಾರ್ ಡೋರ್ಮ್ ಸಿಕ್ಕೋದಿಲ್ಲ ಅಂತ ಹೇಳಿರೋ ಮಲ್ಲಿಕಾ, ತಾವು ಎದುರಿಸಿದ ಎಲ್ಲ ಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಮತ್ತೆ ಬಾಲಿವುಡ್ ನಲ್ಲಿ ಧೂಳೆಬ್ಬಿಸೋದಕ್ಕೆ ಬರ್ತಿದ್ದೀನಿ ಅಂತ ಇನ್ ಡೈರೆಕ್ಟ್ ಆಗಿ ಮಲ್ಲಿಕಾ ಸುಳಿವು ನೀಡಿದ್ದಾರೆ.

ಒಟ್ಟಾರೆ, ಮಲ್ಲಿಕಾ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡ್ತಿರೋ ವಿಚಾರ ಮಾತ್ರ ಪಡ್ಡೇ ಹೈಕಳ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂಗಾಗ್ತಿರೋದಂತೂ ಸುಳ್ಳಲ್ಲ.

- Advertisement -

Latest Posts

Don't Miss