Wednesday, October 15, 2025

Latest Posts

Bollywood News: ರಾಹುಲ್ ಗಾಂಧಿಯನ್ನು ಹೊಗಳಿದ ನಟ ಸೈಫ್ ಅಲಿ ಖಾನ್.. ಕಾರಣವೇನು..?

- Advertisement -

Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ. ಮಾಧ್ಯಮದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ನಾಯಕ ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಸೈಫ್ ಅಲಿ ಖಾನ್, ಎಲ್ಲರೂ ಅತ್ಯುತ್ತಮ ರಾಜಕಾರಣಿಗಳು, ಆದರೆ ರಾಹುಲ್ ಗಾಂಧಿ ಭವಿಷ್ಯದಲ್ಲಿ ದೇಶವನ್ನು ಉತ್ತಮವಾಗಿ ಮುನ್ನಡೆಸುವ ಅರ್ಹತೆ ಹೊಂದಿದ್ದಾರೆ ಎಂದು ತಮ್ಮ ಅನಿಸಿಕೆ ಹೇಳಿದ್ದಾರೆ.

ಅಲ್ಲದೇ, ಅವರನ್ನು ಹಲವರು ಟೀಕೆ ಮಾಡುತ್ತಾರೆ. ಆದರೆ ಆ ಟೀಕೆಗಳನ್ನು ಅವರು ಸಿರಿಯಸ್ ಆಗಿ ತೆಗೆದುಕೊಳ್ಳದೇ, ನಿರ್ಲಕ್ಷಿಸಿ, ಮುನ್ನಡೆಯುವ ರೀತಿ ನನಗೆ ಇಷ್ಟ. ಅವರು ಮಾಡಿದ ಕೆಲಸವನ್ನು ಹಲವರು ಹೀಯಾಳಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಸೈಫ್ ಅಲಿ ಖಾನ್ ತಮ್ಮ ಅನಿಸಿಕೆ ಹೇಳಿದ್ದಾರೆ.

ಇನ್ನು ರಾಜಕಾರಣಕ್ಕೆ ಬರಲಿದ್ದೀರಾ ಎಂದು ಸೈಫ್ ಅಲಿ ಖಾನ್‌ಗೆ ಪ್ರಶ್ನಿಸಿದ್ದಕ್ಕೆ, ಉತ್ತರಿಸಿದ ಸೈಫ್, ಸದ್ಯಕ್ಕೆ ಈ ಬಗ್ಗೆ ನನಗೆ ಆಸಕ್ತಿ ಇಲ್ಲ. ರಾಜಕಾರಣದಿಂದ ದೂರವಿರಲು ಬಯಸುತ್ತೇನೆ ಎಂದು ಸೈಫ್ ಉತ್ತರ ನೀಡಿದ್ದಾರೆ. ಇನ್ನು ತಮ್ಮ ನಾಾಯಕನನ್ನು ಹೊಗಳಿದ್ದಕ್ಕೆ, ಕಾಂಗ್ರೆಸ್ ನಾಯಕರು ಸೈಫ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

- Advertisement -

Latest Posts

Don't Miss