Bollywood News: ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇದ್ದು, ಲಾರೆನ್ಸ್ ಬಿಷ್ಣೋಯ್ ಸಹಚರರಿಂದ ಬಚಾವಾಗಲು, ಸದಾ ಟೈಟ್ ಸೆಕ್ಯೂರಿಟಿ ಇರಿಸಲಾಗಿದೆ. ಅಲ್ಲದೇ, ಕೋಟಿ ಕೋಟಿ ಖರ್ಚು ಮಾಡಿ, ದುಬೈನಿಂದ ಹೊಸ ಬುಲೆಟ್ ಕಾರ್ ಬೇರೆ ಖರೀದಿಸಿದ್ದಾರೆ. ಇನ್ನು ಜೀವ ಬೆದರಿಕೆ ಇದ್ದರೂ ಸಹ, ಸಲ್ಮಾನ್ ಖಾನ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇಲ್ಲಿ ಸಲ್ಮಾನ್ ಖಾನ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಜೊತೆ ರಶ್ಮಕಾ ಮಂದಣ್ಣಗೂ ಸಹ, ಬಿಗಿ ಭದ್ರತೆ ಒದಗಿಸಲಾಗಿದೆ.
ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇರುವ ಕಾರಣ, ಇವರು ಅಭಿನಯಿಸುವ ಸಿನಿಮಾದಲ್ಲಿ ಕೆಲಸ ಮಾಡುವ ಕಲಾವಿದರು, ಕೆಲಸಗಾರರು ಎಲ್ಲೂ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರ ಜೀವ ರಕ್ಷಣೆಗಾಗಿ ಬಾಡಿಗಾರ್ಡ್ಗಳ ತಂಡವನ್ನೇ ನೇಮಿಸಲಾಗಿದೆ.
ಸಲ್ಮಾನ್ ಖಾನ್ಗೆ ಸರ್ಕಾರದ ಕಡೆಯಿಂದಲೂ ಪೊಲೀಸ್ ಬಿಗಿ ಭದ್ರತೆ ಇದ್ದು, ವೈ ಪ್ಲಸ್ ಸೆಕ್ಯೂರಿಟಿ ಒದಗಿಸಲಾಗಿದೆ. ಜೊತೆಗೆ ಸಲ್ಮಾನ್ ಬಾಡಿಗಾರ್ಡ್ ಶೇರು ಕೂಡ ಸಲ್ಮಾನ್ ಜೊತೆ ಇರುತ್ತಾರೆ. ಇದರೊಂದಿಗೆ ಸಲ್ಮಾನ್ ಖಾನ್ ಮತ್ತಷ್ಟು ಬಾಡಿಗಾರ್ಡ್ಸ್ನ್ನ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿದ್ದಾರೆ.
ಸಲ್ಮಾನ್ ಖಾನ್ ಮೇಲೆ ಇರುವ ಸಿಟ್ಟಿನಿಂದ, ಸಲ್ಮಾನ್ ಆಪ್ತನಾಗಿದ್ದ ಬಾಬಾ ಸಿದ್ಧಕಿಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿಕ್ಕಿ ಕೊಂದಿತ್ತು. ಅಲ್ಲದೇ, ಸಲ್ಮಾನ್ ಖಾನ್ ಮನೆ ಮೇಲೆಕಲ್ಲು ಬಿಸಾಡುವ ಮೂಲಕ, ನಾವು ಸಲ್ಮಾನ್ ಮೇಲಿನ ದ್ವೇಷ ಬಿಟ್ಟಿಲ್ಲವೆಂದು ಬಿಷ್ಣೋಯ್ ಗ್ಯಾಂಗ್ ಸೂಚನೆ ನೀಡಿತ್ತು. ಈ ಎಲ್ಲ ಘಟನೆ ಬಳಿಕ, ಸಲ್ಮಾನ್ ಖಾನ್ ಎಚ್ಚೆತ್ತುಕೊಂಡು, ಬಿಗಿ ಭದ್ರತೆಯಲ್ಲೇ ಓಡಾಡುತ್ತಿದ್ದಾರೆ.
ಹಲವು ವರ್ಷಗಳ ಹಿಂದೆ, ಸಲ್ಮಾನ್ ಖಾನ್ ರಾಜಸ್ತಾನದಲ್ಲಿ ಶೂಟಿಂಗ್ಗೆ ಹೋದಾಗ, ಕೃಷ್ಣ ಮೃಗವನ್ನು ಬೇಟೆಯಾಡಿ, ಜೈಲು ಪಾಲಾಗಿದ್ದರು. ಆದರೆ ತಕ್ಷಣ ಬೇಲ್ ಪಡೆದು ಹೊರಬಂದಿದ್ದರು. ಸಲ್ಮಾನ್ ಮಾಡಿದ ತಪ್ಪಿಗೆ ಸಲ್ಮಾನ್ಗೆ ಸರಿಯಾದ ಶಿಕ್ಷೆ ಸಿಗಲಿಲ್ಲವೆಂಬ ಸಿಟ್ಟಿನಲ್ಲಿ ಬಿಷ್ಣೋಯ್, ಸಲ್ಮಾನ್ನನ್ನು ಕೊಲ್ಲುವುದೇ ನಮ್ಮ ಗುರಿ ಎಂದು ಹೇಳಿಕೆ ಕೊಟ್ಟಿದ್ದ. ಏಕೆಂದರೆ, ಬಿಷ್ಣೋಯ್ ಸಮುದಾಯದವರು ಕೃಷ್ಣಮೃಗವನ್ನು ದೇವರೆಂದು ಪೂಜಿಸುತ್ತಾರೆ.