- Advertisement -
ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರ್ಕೆಟ್‌ನಲ್ಲಿ ಬಾಂಬ್ ಇರಿಸಿರುವ ಘಟನೆ ನಡೆದಿದೆ. ಮಕರ ಸಂಕ್ರಾoತಿ ಹಬ್ಬದ ವಾತಾವರಣದಲ್ಲಿರುವ ಮಾರ್ಕೆಟ್‌ನಲ್ಲಿ ಬಾಂಬ್ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದ ಚೀಲ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಈಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇದರ ಬಗ್ಗೆ ಗೊತ್ತಿಲ್ಲದೆ ಜನರು ಹಬ್ಬದ ಸಾಮಾಗ್ರಿಯಲ್ಲಿ ತೊಡಗಿದ್ರು. ಈ ಬ್ಯಾಗ್‌ನ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಜೊತೆ ಬಾಂಬ್ ನಿಷ್ಕಿçಯಾ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬ್ಯಾಗನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್ ಬ್ಲಾಸ್ಟ್ ಆಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ ತಿಳಿಸಿದ್ದಾರೆ.
- Advertisement -