www.karnatakatv.net: ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ತೈಲಗಳ ಬೆಲೆ ಇಳಿಕೆ ಮಾಡುವುದರ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿರುವ ವೇಳೆ ರಾಜ್ಯದ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಉಪಚುನಾವಣೆ ಪ್ರಚಾರಕ್ಕಾಗಿ ತೆರಳುತ್ತಿರುವ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬೊಮ್ಮಾಯಿ ಉಪಚುನಾವಣೆಯ ಬಳಿಕ ಬೆಲೆ ಇಳಿಕೆಯ ಬಗ್ಗೆ ಚರ್ಚಿಸಲಾಗುವುದು ಎಂದು ಸುಳಿವು ನೀಡಿದ್ದಾರೆ. ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೀಸೆಲ್ ದರ 100 ಗಡಿ ದಾಟಿದೆ. . ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.37 ರೂ. ಆಗಿದ್ದರೆ, ರಾಯಚೂರಿನಲ್ಲಿ 100.25 ರೂಪಾಯಿ, ತುಮಕೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.84 ರೂಪಾಯಿ, ಕಲಬುರಗಿಯಲ್ಲಿ 100.16 ರೂಪಾಯಿ ಹಾಗೂ ರಾಮನಗರದಲ್ಲಿ -100.67 ರೂಪಾಯಿಗೆ ಏರಿಕೆ ಆಗಿದೆ. ಬೀದರ್ ನಲ್ಲಿ – 101.22 ರೂಪಾಯಿ ಹಾಗೂ ಚಿತ್ರದುರ್ಗದಲ್ಲಿ- 101.93 ರೂಪಾಯಿ ಇದೆ. ಪ್ರತಿದಿನ ಸಾಗುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ದರ ಇನ್ನಷ್ಟು ಏರಿಕೆಯಾಗುತ್ತಿರುವುದನ್ನು ಕಂಡು ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ.