www.karnatakatv.net: ತುಮಕೂರು: ಬಸವರಾಜ ಬೊಮ್ಮಾಯಿ ಸಿಎಂ ಅದ್ಮೇಲೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಂದಿದ್ದರು. ಸಿಎಂ ಬರೋ ಸುದ್ದಿ ತಿಳಿದ ಜೆಡಿಎಸ್ ಅವರಿಗೆ ಘೇರಾವ್ ಹಾಕಿ ಪ್ರತಿಭಟಿಸಲು ಸಜ್ಜಾಗಿತ್ತು. ಕೊನೆ ಕ್ಷಣದಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯಿತು.
ಬೆಳಂಬೆಳಗ್ಗೆ ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿ ಮುಂದೆ ಖಾಕಿ ಕಾವಲು. ನೆರೆದಿದ್ದ ಜನ ಇವತ್ತು ಜೆಡಿಎಸ್ ಅಫೀಸ್ ಗೆ ಯಾಕೆ ಇಷ್ಟೋದು ಪೊಲೀಸ್ ಬಂದೋಬಸ್ತ್ ಅಂದ್ಕೊಂಡಿದ್ರು. ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿನಲ್ಲಿ ಜಿಲ್ಲಾ ಆವರಣದಲ್ಲಿ ಫೆರಿಪಿರಲ್ ಕ್ಯಾನ್ಸರ್ ಕೇಂದ್ರ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಪೌಷ್ಠಿಕ ಪುನಚ್ಚೇತನ ಕೇಂದ್ರಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೆರಿಸಲು ಆಗಮಿಸಿದರು. ತುಮಕೂರು ಗ್ರಾಮಾಂತರ ಕ್ಷೇತ್ರ ಚೋಟಾ ಸಾಬರ ಪಾಳ್ಯದಲ್ಲಿ ದನಕಾಯೋ ಮಹಿಳೆ ರೇಪ್ ಅಂಡ್ ಮರ್ಡರ್ ನಡೆದು ತಿಂಗಳು ಕಳೆದರೂ ಯಾವುದೆ ಸುಳಿವು ಪತ್ತೆಯಾಗಿಲ್ಲ. ಇದನ್ನ ಖಂಡಿಸಿ ಸಿಎಂಗೆ ಘೇರಾವ್ ಹಾಗೂ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿತ್ತು.
ಮೊದಲು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗಧಿಯಾಗಿತ್ತು. ಸಿಎಂ ಕಾರ್ಯಕ್ರಮ ಮಧ್ಯಾಹ್ನ ಮುಂದೂಡಲಾಯಿತು. ಪಟ್ಟು ಬಿಡದ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸಭೆ ಆರಂಭಿಸಿದರು. ಇದನ್ನ ಅರಿತ ಎಸ್ಪಿ ರಾಹುಲ್ ಕುಮಾರ್ ಸ್ಥಳಕ್ಕೆಭೇಟಿ ನೀಡಿದರು. ಅಲ್ಲದೆ ತುಮಕೂರು ನಗರ ಡಿವೈಎಸ್ಪಿ ಬಿಟ್ಟು ಶಾಸಕರ ಮನವೊಲಿಸಿದರು. ಅಸಮಾಧಾನದ ನುಡುವೆಯೇ ಶಾಸಕ ಗೌರಿಶಂಕರ್ ಪ್ರತಿಭಟನೆಯನ್ನ ಕೈ ಬಿಡುವ ಭರವಸೆ ನೀಡಿದರು.
ಜೆಡಿಎಸ್ ಹೋರಾಟ ಕೈ ಬಿಡುವ ಭರವಸೆ ನೀಡಿದ ಬಳಿಕ ಎಸ್ಪಿ ರಾಹುಲ್ ಕುಮಾರ್ ಸಮಾಧಾನದಿಂದ ಅಲ್ಲಿಂದ ಹೊರಟರು. ತಿಂಗಳು ಕಳೆಯುತ್ತಿರುವ ರೇಪ್ ಅಂಡ್ ಮರ್ಡರ್ ಕೇಸ್ ಸಿಎಂ ಭೇಟಿ ನೀಡಿದ ಬಳಿಕವಾದರೂ, ಪೊಲೀಸ್ ಇಲಾಖೆ ಶೀಘ್ರ ಅರೋಪಿಗಳನ್ನ ಬಂಧಿಸುವಂತಾಗಲಿ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ – ತುಮಕೂರು