ಸಾಹಿತ್ಯ ಭಂಡಾರದ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ…!

www.karnatakatv.net :ಹುಬ್ಬಳ್ಳಿ: ಸಾಹಿತ್ಯ ಭಂಡಾರದ ಮ.ಅನಂತಮೂರ್ತಿ ಅವರ 23 ನೇ ಪುಣ್ಯತಿಥಿ ಅಂಗವಾಗಿ ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಸೆ.17 ರಂದು ಸಂಜೆ 5.30 ಕ್ಕೆ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏಂಟು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ಕಿ ವೇದಿಕೆಯ ಕಾರ್ಯದರ್ಶಿ ಎಮ್.ಎ.ಸುಬ್ರಹ್ಮಣ್ಯ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.ವಿ.ಗುಂಡಪ್ಪ (ಡಿವಿಜಿ) ಅವರ ರಾಜಕೀಯ ಪ್ರಸಂಗಗಳು ಭಾಗ – 1, ರಾಜಕೀಯ ಪ್ರಸಂಗಗಳು ಭಾಗ-2, ತಿಲೋತ್ತಮೆ ಕನಕಾಲುಕಾ, ಪ್ರಹಸನತ್ರಮಿ, ಎ.ನರಸಿಂಹ ಭಟ್ ಅವರ ಮಂಕುತಿಮ್ಮನ ಕಗ್ಗ ಅರ್ಥಾನುಸಂಧಾನ ಅನುವಾದ, ಅರ್ಥಚಿಂತನೆ ಮಾಡಿದ್ದಾರೆ, ಕೆ.ಎಸ್.ನಾರಾಯಣಾಚಾರ್ಯ ಅವರ ‘ಶುರುವಾಗಿದೆ ಮೂರನೇ ವಿಶ್ವಯುದ್ಧ’, ವೀಣಾ ಬನ್ನಂಜೆ ಅವರ ಶೂನ್ಯದಿಂದ ಸಾವಿರದ ತನಕ, ಮಿಂಚು ಹುಳ ಬಿಡುಗಡೆಯಾಗಲಿರುವ ಪುಸ್ತಕಗಳು ಎಂದರು.

ಅಂದು ಪುಸ್ತಕ ಬಿಡುಗಡೆ ಜೊತೆಗೆ ಕನ್ನಡದ ಪರಿಚಾರಕ ಕೆ.ರಾಜಕುಮಾರ್ ಅವರಿಗೆ ಗೌರವಾರ್ಪಣೆ ಮತ್ತು ಸಂವಾದ ಜರುಗಲಿದೆ ಎಂದು ಅವರು ಹೇಳಿದರು.

ಕರ್ನಾಟಕ ಟಿವಿ- ಹುಬ್ಬಳ್ಳಿ

About The Author