ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಇದರ ಆಶ್ರಯದಲ್ಲಿ ಡಾ. ಡಿ.ಎಸ್ ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ಆಯೋಜಿಸಿರುವ ಹುಬ್ಬಳ್ಳಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ ಇಪ್ಪತ್ತೈದನೇ ಪುಣ್ಯ ತಿಥಿ ಹಿನ್ನಲೆ ಗೌರವಾರ್ಪಣೆ, ಪುಸ್ತಕಗಳ ಬಿಡುಗಡೆ ಹಾಗೂ ಚಿಂತನೆ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೭ ರಂದು ಸಂಜೆ ೫.೩೦ ಕ್ಕೆ ನಗರದ ಜೆಸಿ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಡಿ.ಎಸ್ ಕರ್ಕಿ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಂ.ಎ.ಸುಬ್ರಮಣ್ಯ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಾಗರ ರವೀಂದ್ರ ಪುಸ್ತಕಾಲಯದ ವೈ.ಎಂ.ದಂತಿ ಅವರಿಗೆ ಗೌರವಾರ್ಪಣೆ ಮಾಡಲಾಗುವುದು ಎಂದರು. ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಂತಾವರದ ಕನ್ನಡ ಹಿರಿಯ ಸಾಹಿತಿಗಳಾದ ಡಾ. ನಾ. ಮೊಗಸಾಲೆ ಆಗಮಿಸಲಿದ್ದು, ಪುಸ್ತಕ ಬಿಡುಗಡೆಯನ್ನು ಹಾಸ್ಯ ಮಾತುಗಾರರಾದ ಗಂಗಾವತಿ ಪ್ರಾಣೇಶ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ವಿನಯ ಜವಳಿ ವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಏಕನಾಥ ಕಲಬುರ್ಗಿ, ಬಿ.ಎಸ್.ಮಾಳವಾಡ, ವೀರಣ್ಣಾ ಹೂಲಿ, ಶಂಭು ಲಕ್ಷ್ಮೇಶ್ವರ ಉಪಸ್ಥಿತರಿದ್ದರು.
Hospital : ಉಡುಪಿ : ಜಿಲ್ಲಾಸ್ಪತ್ರೆಯ ಅವ್ಯವಸ್ಥೆ , ರೋಗಿಗಳ ಕೂಗು ಹೇಳೋರಿಲ್ಲ ಕೇಳೋರಿಲ್ಲ
Paadayatre; ಸಿದ್ದಾರೂಢ ಮಠಕ್ಕೆ” ಪಾದಯಾತ್ರೆ ನಡೆಸಿದ “ಕಿರಣ ಗೆಳೆಯರ ಬಳಗ”…

