ಸ್ವಂತ ಸಹೋದರಿಯಿಂದಲೇ ಬಚ್ಚಲು ಮನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ

film story

ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಾರಾ ಖಾನ್ ಮತ್ತೊಮ್ಮೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಶೀಘ್ರದಲ್ಲೇ ಅವರು ಶಾಹಿದ್ ಕಾಜ್ಮಿ ಅವರ ಮುಂದಿನ ಚಿತ್ರ ‘1990’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಸಾರಾ ಅವರ ಸಂಬಂಧವು ಯಾವಾಗಲೂ ವಿವಾದಗಳಿಂದ ಕೂಡಿದೆ. ಜೊತೆಗೆ ಹೊಸ ವಿಚಾರವನ್ನು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಅವರು ತಮ್ಮ ನಟನಾ ವೃತ್ತಿಯನ್ನು 2007 ರಲ್ಲಿ ಟಿವಿ ಧಾರಾವಾಹಿ ‘ಸಪ್ನಾ ಬಾಬುಲ್ ಕಾ ಬಿದಾಯಿ’ ಮೂಲಕ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಸಾರಾ ಮಾಡಿದ ಪಾತ್ರ ಬಹಳ ಜನಪ್ರಿಯವಾಯಿತು.

೨೦೧೫ ರಲ್ಲಿ ಹಮಾರಿ ಅಧೋನಿ ಕಹಾನಿ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ

ನಂತರ 2015 ರಲ್ಲಿ, ಸಾರಾ ಖಾನ್ ‘ಹಮಾರಿ ಅಧೂರಿ; ಕಹಾನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ರಾಜ್‌ಕುಮಾರ್ ರಾವ್ ಮತ್ತು ವಿದ್ಯಾ ಬಾಲನ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಸಿನಿಮಾದಲ್ಲಿ ಸಾರಾ, ನೈಲಾ ಎಂಬ ಪಾತ್ರ ಮಾಡಿದ್ದರು. ಇದು ಜನರಿಗೆ ಇಷ್ಟವಾಗಿತ್ತು. ಕಳೆದ ವರ್ಷ, ಕಂಗನಾ ರಣಾವತ್ ಅವರ ಹಿಟ್ ರಿಯಾಲಿಟಿ ಶೋ ‘ಲಾಕ್ ಅಪ್’ ನಲ್ಲಿ ಕೂಡ ಸಾರಾ ಕಾಣಿಸಿಕೊಂಡಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು.

ಮದುವೆಯ ಸಮಯದಲ್ಲಿ ನನಗೆ ಅಷ್ಟು ಮನಸ್ಸು ಇರಲಿಲ್ಲ. .ನಾನು ತುಂಬಾ ಚಿಕ್ಕವಳು

 

ಇನ್ನು ಸಾರಾ ಖಾನ್ ಅವರ ವೈಯಕ್ತಿಕ ಜೀವನವು ಧಾರಾವಾಹಿಗಳು ಮತ್ತು ಚಲನಚಿತ್ರಗಳಿಗಿಂತ ಹೆಚ್ಚು ಮುಖ್ಯಾಂಶಗಳಲ್ಲಿ ಉಳಿದಿದೆ. ಲಾಕ್‌ಅಪ್‌ ಶೋ ನಲ್ಲಿ ಸಾರಾ ತಮ್ಮ ಜೀವನದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಟಿ ತನ್ನ ಮಾಜಿ ಪತಿ ಅಲಿ ಮರ್ಚೆಂಟ್ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ನಾನು ತುಂಬಾ ಚಿಕ್ಕವಳು “ಮದುವೆಯ ಸಮಯದಲ್ಲಿ ನನಗೆ ಅಷ್ಟು ಮನಸ್ಸು ಇರಲಿಲ್ಲ. . ಆದರೆ ಅವರಿಗೆ ಪ್ರಚಾರದ ಹಸಿವಿತ್ತು. ಜೊತೆಗೆ ವಿವಾದಗಳು ಬೇಕಾಗಿತ್ತು” ಎಂದು ಕಟುವಾಗಿ ಹೇಳಿದ್ದಾರೆ.

About The Author