Saturday, December 7, 2024

Latest Posts

ವಿದ್ಯಾರ್ಥಿಗಳಿಗೆ ಬಿಗ್ ಪರದೆ ಮೇಲೆ “ಬ್ರಹ್ಮಾಂಡ ದರ್ಶನ”: ಅಥಿತಿಯಾಗಿ ಪೋಲಿಸ್ ಆಯುಕ್ತ ಶಶಿಕುಮಾರ್ ಭಾಗಿ

- Advertisement -

Dharwad News: ಧಾರವಾಡ: ವಿದ್ಯಾರ್ಥಿಗಳಿಗೆ ಇಸ್ರೋ ಬಗ್ಗೆ ವಿವರಿಸಲು, ಐನೋಕ್ಸ್ ಸಹಭಾಗಿತ್ವದಲ್ಲಿ ಇಂದು ನಗರದ ಐನೋಕ್ಸ ಪಿವಿಆರ್ ಪರದೆಯಲ್ಲಿ ಬ್ರಹ್ಮಾಂಡ ಪ್ರದರ್ಶನ ಮಾಡಲಾಯಿತು.

ಅಸ್ಟ್ರೋನೊಮಿ ಎಕ್ಸ್ಪೊ ೧.೦ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದ ಅಥಿತಿಯಾಗಿ ನಗರ ಪೋಲಿಸ್ ಆಯುಕ್ತ ಎನ್ ಶಶಿಕುಮಾರ್ ಭಾಗಿಯಾಗಿದ್ದರು. ನಮ್ಮ ಇಸ್ರೋ ಬೆಳೆದು ಬಂದ ದಾರಿಯ ಚಿತ್ರಣ ಪ್ರದರ್ಶಿಸಿದ್ದು, ವಿದ್ಯಾರ್ಥಿಗಳಿಗಾಗಿ ಈ ಶೋ ವಿಶೇಷವಾಗಿ ಆಯೋಜನೆ ಮಾಡಲಾಯಿತು.

ಇನೋನೆಕ್ಸ್ಟ್ ಸಂಸ್ಥೆಯಿಂದ ಇನ್ನು ಹಲವಾರು ಕಡೆ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಭಾರತದಾದ್ಯಂತ ಹಲವು ಶಾಲೆಗಳಲ್ಲಿ ಈ ರೀತಿ ಶೋ ಮಾಡಿ ಮಾಹಿತಿ ನೀಡಲಾಗುತ್ತಿದೆ. ಮಕ್ಕಳ ತಿಳುವಳಿಕೆ ಸಲುವಾಗಿ ಅನೇಕ ಮಾಹಿತ ನೀಡುವ ಸಲುವಾಗಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನೇರವಾಗಿ ವಿಜ್ಞಾನಿಗಳೇ ರಾಕೇಟ್ ಸೈನ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

- Advertisement -

Latest Posts

Don't Miss