‘ಭ್ರಮೆ’ ಮೂಡಿಸ್ತಾ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ನಟ ನವೀನ್ ರಘು..!

ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಈಗೀಗ ಒಂದೊಂದೇ ಹೊಸಬರ ಸಿನಿಮಾಗಳು ಶುರುವಾಗ್ತಿವೆ.. ಹಾಗೆ ಇದೀಗ ಚಿತ್ರರಂಗದಲ್ಲಿ ಭ್ರಮೆ ಅನ್ನೋ ಸಿನಿಮಾ ಮೂಡಿಬರ್ತಿದೆ.. ಹಿರಿಯ ನಿರ್ದೇಶಕ ತಿಪಟೂರ್ ರಘು ಅವರ ಪುತ್ರ ನವೀನ್ ರಘು ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.. ಈ ಚಿತ್ರದ ಟ್ರೇಲರ್ ಸದ್ಯ ಬಿಡುಗಡೆಯಾಗಿದೆ..

ವಿಶೇಷ ಅಂದ್ರೆ ಹಿರಿಯ ನಿರ್ದೇಶಕ ಭಗವಾನ್ ಅವರು ಭ್ರಮೆ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ರು.. ತಿಪಟೂರು ರಘು ಅವರೂ ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ರು.. ನಟ ನವೀನ್ ರಘು, ನಿರ್ದೇಶಕ ಭಗವಾನ್ ಅವರ ವಿದ್ಯಾರ್ಥಿ.. ಭಗವಾನ್ ಅವರ ಇಂಡಿಯನ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲೇ ನಟನೆಯ ಬಗ್ಗೆ ತರಬೇತಿ ಪಡೆದು ಇದೀಗ ಸಿನಿಮಾದಲ್ಲಿ ನಟಿಸಿದ್ದಾರೆ.. ಇನ್ನೂ ಈ ಚಿತ್ರವನ್ನ ನವನಿರ್ದೇಶಕ ಚರಣ್ ರಾಜ್ ಅವರು ನಿರ್ದೇಶನ ಮಾಡ್ತಿದ್ದಾರೆ.. ಕುಂದಾಪುರದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಚಿತ್ರವನ್ನ ಮಾಡಲಾಗ್ತಿದೆ.. ಟ್ರೇಲರ್ ನೋಡಿದ್ರೆ ಹಾರರ್ ಥ್ರಿಲ್ಲರ್ ಚಿತ್ರಕತೆಯ ಸಿನಿಮಾ ಇರ್ಬಹುದಾ ಅನ್ನೋ ಕುತೂಹಲ ಮೂಡೋದು ಸಹಜ.. ಆದ್ರೆ ಈ ಚಿತ್ರದಲ್ಲಿ ಯಾವುದೇ ಸಿಜಿ ವರ್ಕ್ ಇಲ್ಲ.. ಸೈಕಲಾಜಿಕಲ್ ಹಾರರ್ ಕಥೆ ಇರುವ ಸಿನಿಮಾ ಅನ್ನೋದು ಚಿತ್ರತಂಡದ ಮಾತು..

ಭ್ರಮೆ ಚಿತ್ರದಲ್ಲಿ ನವೀನ್ ಮೇಲ್ ನರ್ಸ್ ರೋಲ್ ನಲ್ಲಿ ನಟಿಸಿದ್ದಾರೆ.. ಈ ಚಿತ್ರದಲ್ಲಿ ನವೀನ್ ರಘು ಜೊತೆಗೆ ಇಬ್ಬರು ನಾಯಕಿಯರು ಇರಲಿದ್ದಾರೆ.. ನವನಟಿಯರಾದ ಇಶಾನ ಹಾಗೂ ಅಂಜನಾ ಗೌಡ ಈ ಸಿನಿಮಾದಲ್ಲಿ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ.. ಜೊತೆಗೆ  ಕಿರುತೆರೆಯ ಮಜಾ ಟಾಕೀಸ್ ಕಾರ್ಯಕ್ರಮದ ಖ್ಯಾತಿಯ ನಟ ಪವನ್ ಕುಮಾರ್ ಕೂಡ ಈ ಚಿತ್ರದಲ್ಲಿ ಕಾಂಪೌಂಡರ್ ಪಾತ್ರದಲ್ಲಿ ನಟಿಸಿದ್ದಾರೆ..

ಖ್ಯಾತ ಸಂಗೀತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಅವರು ಈ ಚಿತ್ರಕ್ಕೆ ಸಾಹಿತ್ಯ ರಚಿಸಿ ಹಾಗೂ ಸಂಗೀತವನ್ನ ಸಂಯೋಜಿಸಿದ್ದಾರೆ.. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲದ ಕಾರಣ ಸಾಕಷ್ಟು ಸಿನಿಮಾಗಳು ಓಟಿಟಿ ಕಡೆಗೆ ಮುಖ ಮಾಡ್ತಿವೆ.. ಹಾಗೇ ಭ್ರಮೆ ಚಿತ್ರವನ್ನೂ ಕೂಡ ಓಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಡಿದೆ.. ಮತ್ತೊಂದು ವಿಶೇಷ ಅಂದ್ರೆ ಈ ಚಿತ್ರತಂಡ ನಮ್ಮ ಫ್ಲಿಕ್ಸ್ ಅನ್ನುವ ಕನ್ನಡ ಆಪ್ ಕ್ರಿಯೇಟ್ ಮಾಡಿದ್ದು, ಇದೇ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ವಿಶೇಷತೆಯಲ್ಲಿ ಈ ಆಪ್ ನಲ್ಲಿ ಭ್ರಮೆ ಚಿತ್ರವನ್ನ ರಿಲೀಸ್ ಮಾಡಲಿದ್ಯಂತೆ.. ಒಟ್ಚಾರೆ ಸದ್ಯ ರಿವೀಲ್ ಆಗಿರುವ ಭ್ರಮೆ ಚಿತ್ರದ ಟ್ರೇಲರ್ ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬ್ಯುಲ್ಡ್ ಮಾಡಿದೆ..

ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

About The Author