Banglore News : ನಮ್ಮ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರನ್ನಾಗಿ ಮಾಡುವ ಪ್ರಯತ್ನದಲ್ಲಿ ಸರ್ಕಾರ ಶ್ರಮಿಸುತ್ತಿದೆ. ಅನೇಕ ಯೋಜನೆಗಳನ್ನು ಮಾಡುತ್ತಿವೆ. ಇಂದು ಅಂದರೆ ಜುಲೈ 24ರಂದು ಮಹತ್ವದ ಹೆಜ್ಜೆ ಇಟ್ಟಿದ್ದು ಕೆನಡಾ ಮೂಲದ ವರ್ಲ್ಡ್ ಡಿಸೈನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಸಂಸ್ಥೆಯು ನವ ಬೆಂಗಳೂರನ್ನು ಕಟ್ಟಲು ಅಗತ್ಯವಿರುವ ಸಲಹೆಗಳನ್ನು ಬಿಬಿಎಂಪಿ ಹಾಗೂ ಕರ್ನಾಟಕ ಸರ್ಕಾರಕ್ಕೆ ನೀಡಲಿದೆ. ಸಂಸ್ಥೆಯ 200 ಮಂದಿ ನುರಿತ ಇಂಜಿನಿಯರ್‌ಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟು ಇಲ್ಲಿನ ರಸ್ತೆಗಳು, ಫುಟ್‌ಪಾತ್, ಜಂಕ್ಷನ್‌ಗಳು, ಫ್ಲೈಓವರ್‌ಗಳು ಸೇರಿದಂತೆ ಮೊದಲಾದ ಮೂಲಸೌಕರ್ಯಗಳ ವಿನ್ಯಾಸ ಮಾಡಿ ಸಲಹೆ ನೀಡಲಿದ್ದಾರೆ.
ಈ ಮೊದಲು ಬೆಂಗಳೂರು ನಗರವನ್ನು ಮಾತ್ರ ಬ್ರ್ಯಾಂಡ್ ಬೆಂಗಳೂರು ವ್ಯಾಪ್ತಿಯಲ್ಲಿ ತರಲು ಉದ್ದೇಶಿಸಿಸಲಾಗಿತ್ತು. ಆದರೆ, ಈಗಿರುವ ಬೆಂಗಳೂರು ನಗರದಲ್ಲಿ ಸ್ವಲ್ಪ ಮಾತ್ರ ಮಾರ್ಪಾಡು ಮಾಡಲು ಸಾಧ್ಯವಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಡಿಯನ್ನೂ ಕೂಡ ಈ ಯೋಜನೆಯಡಿ ತರಲಾಗಿದೆ. ಬೆಂಗಳೂರು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದ್ದು ಭವಿಷ್ಯದ ಬೆಂಗಳೂರನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ.
Felicitation : ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Degree Exam : ದಕ್ಷಿಣ ಕನ್ನಡದಾದ್ಯಂತ ಮಳೆ ಹಿನ್ನೆಲೆ ಪದವಿ ಪರೀಕ್ಷೆ ಮುಂದೂಡಿಕೆ