- Advertisement -
ನವದೆಹಲಿ : ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಕೆಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಏಪ್ರಿಲ್ 13ಕ್ಕೆ ಅಧಿಸೂಚನೆ ಹೊರಡಿಸಲಿದ್ದು ಏಪ್ರಿಲ್ 20ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ. ಏಪ್ರಿಲ್ 21ಕ್ಕೆ ನಾಮಪತ್ರ ಪರಿಶೀಲನೆ. 24ಕ್ಕೆ ನಾಮಪತ್ರ ವಾಪಸ್ ಪಡೆಯಲು ಅವಕಾಶ. ಮೇ 10 ರಂದು ಮತದಾನ ಮೇ 13ಕ್ಕೆ ಮತ ಎಣಿಕೆ
ಮೇ 23ರ ಕ್ಕೆ ವಿಧಾನಸಭೆಯ ಅವಧಿ ಅಂತ್ಯವಾಗುತ್ತೆ. ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆಯಾಗಬೇಕು. ಕರ್ನಾಟಕದಲ್ಲಿ 5 ಕೋಟಿ 21 ಲಕ್ಷ ಮತದಾರರಿದ್ದಾರೆ.
- 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತ ಚಲಾಯಿಸಲು ಅವಕಾಶ. ಮೊದಲೇ ಮತ ಚಲಾವಣೆಗೆ ನೊಂದಾಯಿಸಿಕೊಳ್ಳಬೇಕು
- 12 ಲಕ್ಷಕ್ಕೂ ಅಧಿಕ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ
- ಐದುವರೆ ಲಕ್ಷ ದಿವ್ಯಾಂಗ ಮತದಾರರಿದ್ದಾರೆ
- 4699 ತೃತೀಯ ಲಿಂಗಿ ಮತದಾರರಿದ್ದಾರೆ.
- ಒಟ್ಟು 58,282 ಮತಗಟ್ಟೆಗಳು, 34219 ಗ್ರಾಮೀಣ ಪ್ರದೇಶದ ಮತಗಟ್ಟೆಗಳು, ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳು. ಶೇಕಡವಾರು ಮತಗಟ್ಟೆಯಲ್ಲಿ 883 ಮತದಾರರಿದ್ದಾರೆ
- ಕಳೆದ ಬಾರಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದೆ
- ಹೆಚ್ಚು ಮತದಾನವಾಗಲು ಜಾಗೃತಿಮೂಡಿಸ್ತೇವೆ. ಹೆಚ್ಚು ಮತದಾನವಾಗಲು ಶ್ರಮವಹಿಸ್ತೇವೆ
- ವೆಬ್ ಸೈಟ್ ಮೂಲಕ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಸಂಪೂರ್ಣ ಮಾಹಿತಿ ಮತದಾರರಿಗೆ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ
- ಯಾವುದೇ ಗಲಾಟೆ ಆಗದಿ ರೀತಿ ಎಚ್ಚರವಹಿಸ್ತೇವೆ. ಗಲಾಟೆ ಆದ್ರೆ ಮರುಮತದಾನ ಆಗುತ್ತೆ. ಹಾಗಾಗಿ ಗಲಾಟೆ ಆಗದಂತೆ ಎಚ್ಚರವಹಿಸ್ತೇವೆ
- ಚುನಾವಣಾ ಅಕ್ರಮದ ಬಗ್ಗೆ ದೂರು ನೀಡಬಹುದು
- ಹಣ, ಮದ್ಯ ಆಮಿಷ ವೊಡ್ಡುವಂತಿಲ್ಲ
- 19 ಜಿಲ್ಲೆ 171 ಚೆಕ್ ಪೋಸ್ಟ್ ನಿರ್ಮಾಣ
- ಬ್ಯಾಂಕ್ ವ್ಯವಹಾರಗಳ ಮೇಲೂ ಹದ್ದಿನಕಣ್ಣು
- ಜನ ಕೂಡ ಚುನಾವಣೆಗೆ ಸಹಕಾರ ನೀಡಬೇಕು
- Advertisement -