ಶಾಲಾ ಕಾಮಗಾರಿ ಬಿಲ್‌ಗೆ ಲಂಚ ಬೇಡಿಕೆ, ಲೋಕಾಯುಕ್ತ ಬಲೆಗೆ ಇಂಜಿನಿಯರ್‌ಗಳು!

ಲಂಚ ಪಡೆಯುವಾಗ ತಿಪಟೂರು ಜಿಲ್ಲಾಪಂಚಾಯ್ತಿ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 47500 ರೂ ಲಂಚ ಪಡೆಯುವಾಗ ತಿಪಟೂರು AEE ಸ್ವಾಮಿ ಬಿ.ಸಿ, ಸಹಾಯಕ ಇಂಜಿನಿಯರ್ ಸುಹಾಸ್ ಮತ್ತು ಕಂಪ್ಯೂಟರ್ ಆಪರೇಟರ್ ಹರೀಶ್ ಸಿಕ್ಕಿಹಾಕಿಕೊಂಡಿದ್ದಾರೆ.

ತಿಪಟೂರು ತಾಲ್ಲೂಕಿನ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕೆಲಸನಿರ್ವಹಿಸುತ್ತಿದ್ದ ಸ್ವಾಮಿ ಬಿ.ಸಿ ರವರು ಹಾಗೂ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್ ಎಂದು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ ನಡೆದ ಶಾಲೆಗಳ ಕಾಮಗಾರಿಯೊಂದಕ್ಕೆ ಬಿಲ್ ಮಾಡಲು ಲಂಚ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.

ಗುತ್ತಿಗೆದಾರ ಸುನಿಲ್ ಎಂಬುವರು ಲಂಚ ನೀಡಲು ಇಷ್ಟವಿಲ್ಲದ ಕಾರಣ ದಿನಾಂಕ 11.11.2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಲೋಕಾಯುಕ್ತರು ಅಧಿಕಾರಿಗಳು ಬಲೆ ಬೀಸಿದ್ದು ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಲಂಚ ಪಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆ.

ಸ್ಥಳದಲ್ಲಿಯೆ ಅಧಿಕಾರಿಯನ್ನ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದು ತಿಪಟೂರು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಚೇರಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜು ಟಿ ರವರ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author