Sunday, October 13, 2024

Latest Posts

ಇಷ್ಟವಿಲ್ಲದ ಮದುವೆ- ಹುಡುಗಿ ಏನ್ ಮಾಡಿದ್ಲು ಗೊತ್ತಾ…???

- Advertisement -

ತುಮಕೂರು: ಇಷ್ಟವಿಲ್ಲದ ಹುಡುಗನೊಂದಿಗೆ ಮದುವೆ ತಪ್ಪಿಸಿಕೊಳ್ಳಲು ವಧು ವಿಷ ಕುಡಿದಂತೆ ನಾಟಕವಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಮಳೆಕೋಟೆ ಗ್ರಾಮದ ಯುವತಿಗೆ ಮಂಜುನಾಥ್ ಎಂಬಾತನೊಂದಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಆದ್ರೆ  ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಯುವತಿಗೆ ಈ ಮದುವೆ ಇಷ್ಟವಿರಲಿಲ್ಲ. ಮನೆಯವರನ್ನು ಒಪ್ಪಿಸಲಾಗದೆ ಇಷ್ಟು ದಿನ ಸುಮ್ಮನಿದ್ದ ಹುಡುಗಿ ನಿನ್ನೆ ರಾತ್ರಿ ಮನೆಯಿಂದ ಓಡಿಹೋಗೋ ಪ್ಲ್ಯಾನ್ ಮಾಡಿದ್ದಾಳೆ. ಹೀಗಾಗಿ ಮೈಮೇಲೆ ವಿಷ ಚೆಲ್ಲಿಕೊಂಡು ವಿಷ ಸೇವಿಸಿ ಒದ್ದಾಡಿದಂತೆ ನಾಟಕವಾಡಿದ್ದಾಳೆ. ಇದರಿಂದ ಕಂಗಾಲಾದ ಯುವತಿಯ ಪೋಷಕರು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ರು. ಮನೆಯಿಂದಾಚೆ ಹೋಗಲು ಅವಕಾಶ ಸಿಕ್ಕಿದ್ದೇ ತಡ, ಯುವತಿ ಆಸ್ಪತ್ರೆಯಿಂದಲೇ ತನ್ನ ಪ್ರಿಯಕರನಿಗೆ ವಿಷಯ ತಿಳಿಸಿ ಆತನನ್ನು ಕರೆಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಇಂದು ನಿಗದಿಯಾಗಿದ್ದ ಮದುವೆ ರದ್ದಾಗಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಯ್ ಗುರೂಜಿ ಆಶ್ರಮದಲ್ಲಿ ಆಗಿದ್ದೇನು…???ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=tyzjz3GUCYk
- Advertisement -

Latest Posts

Don't Miss