Tuesday, October 14, 2025

Latest Posts

ಬ್ರಿಟನ್ ರಾಣಿ ಕಿರೀಟಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ..?!

- Advertisement -

Special News:

ಬ್ರಿಟನ್ ರಾಣಿ  ಕಿರೀಟಕ್ಕೂ ರ‍್ನಾಟಕ್ಕೂ  ಒಂದು ನಂಟಿದೆ. ರಾಜ ಮನೆತನದ ಮಹಾ ಇತಿಹಾಸದಲ್ಲಿ ಕರುನಾಡಿನ ಶ್ರೀಮಂತಿಕೆ  ಅಡಕವಾಗಿದೆ. ಸರ‍್ಯ ಮುಳುಗದ  ಸಾಮ್ರಾಜ್ಯದಲ್ಲಿ  ರ‍್ನಾಟಕದ ಸಂಪತ್ತನ್ನು ಇಂದಿಗೂ ತಲೆ  ಮೇಲೆ  ಹೊತ್ತು ತಿರುಗುತ್ತಿದ್ದಾರೆ. ಇನ್ನೂ ಭಾರತಕ್ಕೆ ಮರಳಿಲ್ಲ  ಬ್ರಿಟನ್ ನಲ್ಲಿರೋ  ಭಾರತದ ಸೊತ್ತು. ಹಾಗಿದ್ರೆ ಏನದು ರಾಜಮನೆತನದ ಗಾಂಬರ‍್ಯದ ಸ್ವತ್ತು ಹೇಳ್ತೀವಿ ಈ ಸ್ಟೋರಿಯಲ್ಲಿ.

ಇತಿಹಾಸ ಪುಟ ತಿರುವಿದ ತಕ್ಷಣ ರಕ್ತಚಿತ್ತವಾದ ಬರಹಗಳ ಜೊತೆ ನಮಗೆ ದೊರೆಯುವದೇ ಸಂಪತ್ತಿನ ಸರಮಾಲೆಗಳ ಮೇಲಿನ ರ‍್ವಾಧಿಕಾರ. ಬ್ರಟನ್  ಇತಿಹಾಸ ಪುಟದಲ್ಲೂ ಕರುನಾಡ ಜೊತೆಗಿನ ನಂಟೊಂದು  ಇದೀಗ ರ‍್ಚೆಯಾಗುತ್ತಿದೆ. ಸಂಪದ್ಭರಿತ  ರಾಷ್ಟ್ರದಲ್ಲೂ ಕರುನಾಡ ಕರ‍್ತಿಯನ್ನು ರಾಣಿಯ ತಲೆ ಮೇಲೆ ಹೊತ್ತಿದ್ದರು ಎನ್ನಲಾಗಿದೆ. ಹೌದು ಬೆಟ್ಟದ  ಮೇಲಿನ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎಲ್ಲಿಂದ ಎಲ್ಲಿಗೆ ಸಂಬಂಧವಯ್ಯ ಎಂದು ನೀವು ಕೇಳಬಹುದು. ಆದರೆ ಈ ಸುದ್ದಿ ಕೇಳಿದ್ರೆ ನೀವು ಆಶ್ರ‍್ಯ ಪಡೋದಂತು ಗ್ಯಾರಂಟಿ. ಬ್ರಿಟನ್  ರಾಣಿಯ ತಲೆಮೇಲೆ  ಹೊಳೆಯೋ ಆ   ಕಿರೀಟಕ್ಕೂ ಕರುನಾಡಿಗೂ ಒಂದು ನಂಟಿದೆ.

ಇದೀಗ ಬ್ರಿಟನ್ ರಾಣಿ ಎಲಿಜಬೆತ್ ನಿಧನದ ನಂತರ, ಅವರು ಧರಿಸುತ್ತಿದ್ದ ಕೊಹಿನೂರು ವಜ್ರದ ಕಿರೀಟದ ಕುರಿತು ರ‍್ಚೆ ಜೋರಾಗಿದೆ. ಎಲಿಜಬೆತ್ ರಾಣಿ ಧರಿಸುತ್ತಿದ್ದ ಕಿರೀಟದಲ್ಲಿದ್ದ ವಜ್ರ, ಇದು ಭಾರರತದ್ದು ಎನ್ನುವುದು ಮತ್ತೆ ಮುನ್ನಲೆಗೆ ಬಂದಿದೆ. ಆದರೆ ಇದು ಕೃಷ್ಣಾನದಿ ತೀರದಲ್ಲಿ ದೊರೆತ ಡೈಮೆಂಡ್ ಆಗಿದ್ದು, ರ‍್ನಾಟಕದ ಸ್ವತ್ತು ಎನ್ನಲಾಗುತ್ತಿದೆ.

ಬ್ರಿಟನ್ ರಾಣಿ ೨ನೇ ಎಲಿಜಬೆತ್ ನಿಧನ ನಂತರ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಜ್ರ ಭಾರತದ್ದು, ಅದರಲ್ಲೂ ರ‍್ನಾಟಕದ ಯಾದಗಿರಿ ಯಲ್ಲಿ ಸಿಕ್ಕಿದ್ದು ಅನ್ನಲು ಕೆಲವೊಂದು ದಾಖಲೆಗಳು  ಕೂಡ ಸಿಕ್ಕಿವೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಹರಿಯುತ ಕೃಷ್ಣಾ ನದಿ ತೀರದಲ್ಲಿ ಸಿಕ್ಕಿತೆನ್ನಲಾಗ್ತಿದೆ.ವಜ್ರ ಸಿಕ್ಕ ಸ್ಥಳವೆಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ನಾಮಫಲಕ ಹಾಕಲಾಗಿದೆ. ಡೈಮಂಡ್ ಸಿಕ್ಕ ಸ್ಥಳದಲ್ಲಿ ಮರಳು ಗಣಿಗಾರಿಕೆ ಕೂಡ ನಿಷೇಧ ಮಾಡಲಾಗಿದೆ. ಆದರೆ ವಜ್ರ ದೊರೆತ ಸ್ಥಳವು ಈಗ ಹಾಳುಕೊಂಪೆಯಾಗಿರುವುದು ಮಾತ್ರ ಶೋಚನೀಯ.

೧೭೯೯ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ ಗೆದ್ದ ನಂತರ ಖಜಾನೆಯಲ್ಲಿದ್ದ ವಜ್ರವು ಬ್ರಿಟಿಷ್‍ರು ದೋಚಿ ಕೊಂಡು ಹೋಗಿರುತ್ತಾರೆ. ಅದನ್ನೇ ರಾಣಿ ವಿಕ್ಟೋರಿಯಾ ಬ್ರೂಚ್‍ ರವರು ಕಿರೀಟದಲ್ಲಿ ಧರಿಸುತ್ತಾರೆ. ಆದರೆ ಮಹಿಳೆಯರು ಮಾತ್ರ ಕೊಹಿನೂರ್ ವಜ್ರವನ್ನ ಧರಿಸಬೇಕೆಂದು ಆದೇಶ ಮಾಡಿದ್ದ ಹಿನ್ನೆಲೆ, ನಂತರ ಬಂದ ರಾಣಿ ಎಲಿಜಬೆತ್ ಕೊಹಿನೂರು ವಜ್ರ ಕಿರೀಟ ಧರಿಸುತ್ತಾರೆ. ಇದೀಗ ೨ನೇ ಎಲಿಜಬೆತ್ ನಿಧನ ನಂತರ ಕೊಹಿನೂರು ವಜ್ರದ ಬಗ್ಗೆ ಸಾಕಷ್ಟು ರ‍್ಚೆ ಆಗ್ತಿದೆ.

ಈ ಕಿರೀಟದಲ್ಲಿರುವ ಈ ಬೆಲೆಬಾಳುವ ವಜ್ರದ ಮಾಲೀಕತ್ವ ತನ್ನದೆಂದು ಈಗಾಗಲೇ ಭಾರತ ಮಾತ್ರವಲ್ಲ, ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ದೇಶಗಳೂ ತಮ್ಮದು ಎಂದು ವಾದಿಸಿದ್ದು, ತಮಗೆ ಆ ವಜ್ರದ ಕಿರೀಟವನ್ನು ನೀಡಬೇಕೆಂದು ಒತ್ತಾಯಿಸಿವೆ. ಆದರೆ, ಬ್ರಿಟನ್ ರ‍್ಕಾರ ಮಾತ್ರ ಈ ಯಾವುದೇ ವಾದಗಳನ್ನು ಪುರಸ್ಕರಿಸಿಲ್ಲ.

೧೯೭೨ರಲ್ಲಿ ಈ ಕಿರೀಟವನ್ನು ೧೯೩೭ರಲ್ಲೇ ತಯಾರಿಸಲಾಗಿದ್ದು, ಅದನ್ನು ಆಗಿನ ಬ್ರಿಟನ್ ಮಹಾರಾಜನಾಗಿದ್ದ ೬ನೇ ಕಿಂಗ್ ಜರ‍್ಜ್ ಅವರಿಗಾಗಿ ವಿಶೇಷವಾಗಿ ರ‍್ಡರ್ ಕೊಟ್ಟು ಮಾಡಿಸಲಾಗಿತ್ತು ಎಂದು ಬ್ರಿಟನ್ ರ‍್ಕಾರ ಈ ಮುಂಚೆಯೇ ಹೇಳಿದೆ.

ಈ ವಜ್ರವು ಯಾದಗಿರಿ ಜಿಲ್ಲೆಗೆ ಸೇರಿದ್ದು ಎಂದು ಸಂಸದ ಜಿ.ಸಿ.ಚಂದ್ರಶೇಖರ ಜಾಲತಾಣದಲ್ಲಿ ಪೊಸ್ಟ್ ಕೂಡಾ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ರ‍್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮ ಸ್ವತ್ತನ್ನು ನಮ್ಮ ದೇಶಕ್ಕೆ ತರುವ ಪ್ರಯತ್ನ ಮಾಡ್ಬೇಕು ಎನ್ನಲಾಗ್ತಿದೆ.

ಕಿರೀಟದಲ್ಲಿರುವ ವಜ್ರ ೧೦೫.೬ ಕ್ಯಾರಟ್ ನಷ್ಟು ಶುದ್ಧತೆಯನ್ನು ಹೊಂದಿದ್ದು, ಇದು ರಾಜಮನೆತನದ ಪ್ರತಿಬಿಂಬ ಎಂಬಂತೆಯೇ ಬಣ್ಣಿಸಲಾಗಿದೆ. ೧೮೪೯ರಲ್ಲಿ ಭಾರತದ ಪಂಜಾಬ್ ಪ್ರಾಂತ್ಯವನ್ನು ಬ್ರಿಟಿಷರು ವಶಪಡಿಸಿಕೊಂಡಾಗ ಆ ಪ್ರಾಂತ್ಯದ ವಶದಲ್ಲಿದ್ದ ಎಲ್ಲಾ ವಸ್ತುಗಳು ಬ್ರಿಟಿಷರ ಪಾಲಾದವು. ಅದರಂತೆ, ಆ ರಾಜನ ವಶದಲ್ಲಿದ್ದ ಕೊಹಿನೂರ್ ವಜ್ರವೂ ಬ್ರಿಟಿಷರ ಪಾಲಾಯಿತು. ಅದನ್ನು ಬ್ರಿಟನ್ ಗೆ ರವಾನಿಸಲಾಗಿತ್ತು. ಅದರ ಬೆಲೆಕಟ್ಟಲಾಗದ ಮೌಲ್ಯವನ್ನು ಅರಿತ ರಾಜಮನೆತನ ಅದನ್ನು ರಾಜನ ಕಿರೀಟದಲ್ಲಿ ಅಳವಡಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ, ಈ ವಜ್ರವು ರ‍್ನಾಟಕದಲ್ಲಿ ದೊರೆತಿದ್ದು ಎಂಬುದನ್ನು ಅನೇಕ ಬಾರಿ ಮರೆಮಾಚುತ್ತಾರೆ.

ಮತ್ತೊಂದೆಡೆ ವಿಶ್ವ ಖ್ಯಾತಿ ಹೊಂದಿದ್ದ ಡೈಮಂಡ್  ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಸಿಕ್ಕಿದ್ದು ಅಂತಾ ವೆಬ್‍ಸೈಟ್‍ಗಳಲ್ಲಿ ಸ್ವಲ್ಪ ಗೊಂದಲ ಸೃಷ್ಟಿಸುತ್ತಿವೆ. ಅದೇನೇ ಇರಲಿ ಕೊಹಿನೂರ್ ವಜ್ರ ರ‍್ನಾಟಕದ್ದೇ ಎನ್ನುವುಕ್ಕೆ ರಾಜ್ಯದಲ್ಲಿ ಸಾಕಷ್ಟು ಪುರಾವೆಗಳು ಇವೆ.ಒಟ್ಟಿನಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿವೆ.

 

ವಾರಣಾಸಿ : ಹಿಂದೂಗಳ ಅರ್ಜಿ ಪುರಸ್ಕರಿಸಿದ ಕೋರ್ಟ್

ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು

ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ…! ಇದೆಂತಾ ಭಕ್ತಿ…!

- Advertisement -

Latest Posts

Don't Miss