ಈ ಹಿಂದೆ ದೇಶದಲ್ಲಿ ಶ್ರದ್ಧಾ ಕೊಲೆ ಕೇಸ್ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆಕೆಯ ಪ್ರಿಯಕರನೇ ಆಕೆಯ ದೇಹವನ್ನ ತುಂಡು ತುಂಡಾಗಿ ಮಾಡಿ ಫ್ರೀಡ್ಜ್ ನಲ್ಲಿಟ್ಟು ನಂತರ ಅದನ್ನ ಯಾರಿಗೂ ಕಾಣದ ಹಾಗೆ ವಿಲೇವಾರಿ ಮಾಡ್ತಿದ್ದ. ಇದೇ ರೀತಿಯ ಪ್ರಕರಣ ಬೆಂಗಳೂರಿನಲ್ಲೂ ನಡೆದಿತ್ತು. ಅಂದಹಾಗೆ ಈ ವಿಷಯ ಈಗ್ಯಾಕೆ ಅನ್ನೋದಾದ್ರೆ , ಸದ್ಯ ಇದೇ ಮಾದರಿಯ ರಾಕ್ಷಸೀಯ ಕೃತ್ಯ ಕೊಲ್ಕತ್ತಾದಲ್ಲಿ ನಡೆದಿದೆ. ಆ ಬಗ್ಗೆ ಹೇಳ್ತೀವಿ ಇಂದಿನ ಈ ವೀಡಿಯೋದಲ್ಲಿ
ದೇಶದಲ್ಲಿ ಇತ್ತೀಚಿಗೆ ಶ್ರದ್ದಾ ಕೊಲೆ ಕೇಸ್ ಮಾದರಿ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರ್ತಿದೆ. ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಂದಿದ್ದಾನೆ. ಅಷ್ಟೇ ಅಲ್ಲ ಆಕೆಯ ದೇಹವನ್ನು 3 ತುಂಡಾಗಿ ಕತ್ತರಿಸಿದ್ದಾನೆ.
ಹೌದು ಬಂಗಾಳದ ಕೋಲ್ಕತ್ತಾದಲ್ಲಿ ಅತಿಯುರ್ ರೆಹಮಾನ್ ಲಸ್ಕರ್ ಎಂಬಾತ ತನ್ನ ಅತ್ತಿಗೆಯನ್ನೇ ಕೊಂದು ದೇಹವನ್ನ ಭಾಗ ಭಾಗ ಮಾಡಿ ಬೇರೆ ಬೇರೆ ಕಡೆಗಳಲ್ಲಿ ವಿಲೇವಾರಿ ಮಾಡಿದ್ದಾನೆ. ಅಂದಹಾಗೆ ಮೃತ ಮಹಿಳೆ 2 ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದಳು. ಹೀಗಾಗಿ ತನ್ನ ಮೈದುನ ರೆಹಮಾನ್ ಜೊತೆಯಲ್ಲೇ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗ್ತಿದ್ದಳು. ರೆಹಮಾನ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆಕೆಯನ್ನ ಆಗಾಗ ಪೀಡಿಸ್ತಿದ್ದ. ಇದಕ್ಕೆ ಆಕೆ ಒಪ್ಪದ ಕಾರಣ ಆಕೆಯನ್ನ ಕತ್ತು ಹಿಸುಕಿ ಕೊಂದಿದ್ದಾನೆ.
ಅಷ್ಟೇ ಅಲ್ಲದೇ ಆಕೆಯ ರುಂಡ, ಮುಂಡ,ದೇಹದ ಕೆಳಭಾಗವನ್ನ ಕೂಡ ಕತ್ತರಿಸಿ ರಾಕ್ಷಸೀಯತೆ ಮೆರಿದಿದ್ದಾನೆ. ಆಕೆಯ ಎಲ್ಲಾ ದೇಹದ ಭಾಗಗಳನ್ನ ಬೇರೆ ಬೇರೆ ಜಾಗದಲ್ಲಿ ಎಸೆದಿದ್ದಾನೆ. ಇನ್ನು ಆಕೆಯ ರುಂಡ ಟಾಲಿಗಂಜ್ ನ ಕಸದ ರಾಶಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ನಂತರದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿ, ಬಳಿಕ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಲಾಗಿದೆ.