Saturday, July 27, 2024

Latest Posts

‘ಬಹುಮತವಿಲ್ಲದಿದ್ರೂ ಕ್ಯಾಬಿನೆಟ್ ಸಭೆ, ವರ್ಗಾವಣೆ ದಂಧೆ ನಡೆಸ್ತಿದ್ದಾರೆ’- ಬಿಎಸ್ವೈ ಕಿಡಿ

- Advertisement -

ಬೆಂಗಳೂರು: ವಿಶ್ವಾಸಮತ ಯಾಚನೆ ಸೋಮವಾರಕ್ಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ ಮುಂದುವರಿದಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೈತ್ರಿ ವಿರುದ್ಧ ತಮ್ಮ ಆರೋಪ ಮುಂದುವರಿಸಿದ್ದು, ಸಂಖ್ಯಾಬಲವಿಲ್ಲದಿದ್ರೂ ಸಂಪುಟ ಸಭೆ ಹಾಗೂ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ ಅಂತ ಕಿಡಿ ಕಾರಿದ್ದಾರೆ.

ಬೆಂಗಳೂರಿನ ರಮಡಾ ರೆಸಾರ್ಟ್ ಬಳಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಇಲ್ಲಸಲ್ಲದ ಆರೋಪವನ್ನು ಸಾ.ರಾ ಮಹೇಶ್ ಮಾಡಿದ್ದಾರೆ. ರಾಜ್ಯಪಾಲರು ವಿಶ್ವಾಸಮತ ಯಾಚನೆ ಮಾಡಲು 3 ಬಾರಿ ಸೂಚನೆ ನೀಡದ್ದರೂ ಸಹ ಅದನ್ನು ಮೀರಿದ್ದಾರೆ. ಬಹುಮತವಿಲ್ಲದಿದ್ರೂ ಸಿಎಂ ಸ್ಥಾನದಲ್ಲಿ ಉಳಿಯುವ ನೈತಿಕತೆ ಇಲ್ಲ. ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿಲ್ಲ. ಆದ್ರೂ ಇವರು ಕ್ಯಾಬಿನೆಟ್ ಮೀಟಿಂಗ್ ಕರೆಯುತ್ತಾರೆ. ಸರ್ಕಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಅಂತ ರಾಜ್ಯಪಾಲರು ಹೇಳಿದ್ರೂ ಸಹ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಇದನ್ನೆಲ್ಲಾ ರಾಜ್ಯದ ಜನರು ನೋಡುತ್ತಿದ್ದಾರೆ. ಹೀಗಾಗಿ ಬಹುಮತವಿದ್ದರೆ ಸಾಬೀತುಪಡಿಸಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದರು.

ಇನ್ನು ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ಶಾಸಕರ ವಿಪ್ ಕುರಿತು ತೀರ್ಪು ಹೊರಬೀಳಲಿದೆ. ಮೈತ್ರಿ ನಾಯಕರು ತಮ್ಮ ಪರ ತೀರ್ಪು ಬರುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ. ಆದ್ರೆ ಸುಪ್ರೀಂ ಒಂದು ಬಾರಿ ತೀರ್ಮಾನ ಮಾಡಿದ ಮೇಲೆ ಮತ್ತೆ ಪ್ರಶ್ನಿಸಲು ಬರುವುದಿಲ್ಲ. ಆದ್ರೂ ಕೂಡ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ. ಇನ್ನು ಅಂತಿಮವಾಗಿ ಸೋಮವಾರ ವಿಶ್ವಾಸಮತ ಯಾಚನೆ ನಡೆಯಲಿದೆ ಮುಂದೆ ಏನಾಗುತ್ತೋ ನೋಡೋಣ ಅಂತ ಯಡಿಯೂರಪ್ಪ ಹೇಳಿದರು.

- Advertisement -

Latest Posts

Don't Miss