ಹುಬ್ಬಳ್ಳಿ: ಗಾಲಿ ಜನಾರ್ದನ ರೆಡ್ಡಿ ಹಾಗೂ ನನ್ನ ಸ್ನೇಹ ಯಾವತ್ತಿಗೂ ಶಾಶ್ವತವಾಗಿರುತ್ತದೆ. ಬಿಜೆಪಿ ನನಗೆ ರಾಜಕೀಯ ಸ್ಥಾನಮಾನ ಕೊಟ್ಟಿದೆ. ನಾನು ಸ್ನೇಹವನ್ನೂ ಬಿಡಲ್ಲ, ರಾಜಕಾರಣವನ್ನು ಬಿಡಲ್ಲ. ಬಿಜೆಪಿಯಲ್ಲಿ ನಮಗೆ ಗೌರವ, ಸ್ಥಾನಮಾನ ಸಿಕ್ಕಿದೆ ಎಂದು ಸಚಿವ ಬಿ.ಶ್ರೀರಾಮುಲು ಹುಬ್ಬಳ್ಳಿಯಲ್ಲಿ ಹೇಳಿದರು. ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆ ವಿಚಾರವಾಗಿ ಮಾತನಾಡಿದ ಅವರು, ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಕೇವಲ ಸಾರ್ವಜನಿಕ ಜೀವನದಲ್ಲಿ ಬೆರೆಯಬೇಕು ಎಂದುಕೊಂಡಿದ್ದಾರೆ. ಜನಾರ್ಧನ ರಡ್ಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಮಂಡ್ಯದಳ್ಳಿ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ
ಸದನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಬಿಲ್ ಮಂಡನೆ ಆಗುತ್ತಿದೆ. ವಿಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗಬೇಕು. ಸಿದ್ದರಾಮಯ್ಯ ಅವರು ಚರ್ಚೆಗೆ ಅವಕಾಶ ಕೊಡದೇ ಬಿಲ್ ಪಾಸ್ ಆಗಲು ಸಹಕಾರ ಕೊಡಬೇಕು. ಈ ವಿಚಾರದಲ್ಲಿ ನಮ್ಮ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವ ನಿರ್ಧಾರದಲ್ಲಿದೆ. ಇದೇ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸಿದ್ದೇವೆ. ಸದನದಲ್ಲಿ ತೀರ್ಮಾನವಾದ ನಂತರ ಶೆಡ್ಯೂಲ್ 9ರಲ್ಲಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಸದನದಲ್ಲಿ ವಿಪಕ್ಷಗಳು ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದು ಹೇಳಿದರು. ನಿನ್ನೆ, ಮೊನ್ನೆಯಷ್ಟೇ ನಡೆದ ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಆಗಬೇಕಿತ್ತು. ಸಣ್ಣ ಸಣ್ಣ ಕಾರಣಗಳು ಜಗಳವಾಡಿ ದಿನ ಹಾಳು ಮಾಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮೆಲ್ಲ ಹಿರಿಯರು ಸೇರಿ ಈ ಬಗ್ಗೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅವಧಿಗೂ ಮುನ್ನ ಚುನಾವಣೆಯ ಯಾವುದೇ ಪ್ರಸ್ತಾವನೆ ಇಲ್ಲ : ಸಿಎಂ ಬೊಮ್ಮಾಯಿ
ಪಂಜಾಬ್‌ನಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್ ಪಡೆ