ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ಕಂದಾಯ ಸಚಿವ ಆರ್.ಅಶೋಕ್ ಅವರು ಕೋಲಾರದಲ್ಲಿ ಮಾತನಾಡಿದ್ದು, ಗುಜರಾತ್ ನಲ್ಲಿ ಕಾಂಗ್ರೆಸ್ ಧೂಳಿಪಟ ಆಗಿದೆ. ಸಿದ್ದು ಹಾಗೂ ಡಿಕೆಶಿ ನಡುವೆ ಬೀದಿ ರಂಪಾಟವಾಗಿದೆ. ದೆಹಲಿಗೆ ಹೋದರು ಅವರ ಜಗಳ ನಿಂತಿಲ್ಲ.ಜನರು ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಬಯಸಿದ್ದಾರೆ. ರಾಜ್ಯದ ಖಜಾನೆ ತುಂಬಿದೆ, ಜನರ ನೋವಿಗೆ ಸ್ಪಂದಿಸುತ್ತೇವೆ. ಬಿಎಸ್ ಯಡಿಯೂರಪ್ಪನವರನ್ನು ನಾವು ಎಲ್ಲೂ ಕಡೆಗಣಿಸಿಲ್ಲ ಎಂದು ಹೇಳಿದರು.
ಮೊಬೈಲ್ ನಿಂದ ಪೂಜಾರಿಗಳು ಮಂತ್ರ ಹೇಳೊದಕ್ಕೂ ಕಷ್ಟವಾಗುತ್ತಿದೆ : ಸಚಿವ ಆರ್.ಅಶೋಕ್
ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಆಡಳಿತ ಪಕ್ಷದ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆವಾಗ ಪ್ರೊಟೊಕಾಲ್ ಇರುತ್ತದೆ. ಬಿಎಸ್ ವೈ ಅವರ ನೇತೃತ್ವದಲ್ಲೇ ನಾವು ಚುನಾವಣೆಗೆ ಹೋಗುತ್ತೇವೆ. ಗುಜರಾತ್ ಮಾಡಲ್ ಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಮೋದಿ ಹಾಗೂ ಅಮಿತ್ ಶಾ ಕಂಡರೆ ಎಷ್ಟು ಭಯ ಇದೆ ಎಂಬುದು ಖರ್ಗೆ ಅವರ ಹೇಳಿಕೆಯಿಂದ ಗೊತ್ತಾಗುತ್ತಿದೆ.ಸಮ್ಮಿಶ್ರ ಸರ್ಕಾರ ಇದ್ದಾಗ 17 ಜನ ಬಂದಿದ್ದಾರೆ. ಅವರನ್ನೇ ತಡೆಯುವ ಯೋಗ್ಯತೆ ಇಲ್ಲ ಅವರಿಗೆ. ಕಾಂಗ್ರೆಸ್ ನ 10 ಶಾಸಕರ ಟೀಂ ಬಿಜೆಪಿ ಗೆ ಬರ್ತಿದ್ದಾರೆ ಎಂದು ತಿಳಿಸಿದರು.