Sunday, March 3, 2024

Latest Posts

ಕಮೀಷನ್ ಪಡೆಯೋರಿಗೆ ಮಾತ್ರ ತಾಜ್ ಹೋಟೆಲ್- 1 ವರ್ಷ ಜನರಿಗೆ ನೀವು ಸಿಕ್ಕಿದ್ರಾ ಸಿಎಂ..?- ಬಿಎಸ್ ವೈ ಪ್ರಶ್ನೆ

- Advertisement -

ಬೆಂಗಳೂರು: ಸಿಎಂ ಕುಮಾರಸ್ವಾಮಿ ಫೈವ್ ಸ್ಟಾರ್ ಹೋಟೆಲ್ ವಾಸ್ತವ್ಯಕ್ಕೆ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಕಮೀಷನ್ ಪಡೆಯೋರು ಮಾತ್ರ ತಾಜ್ ನಂತಹ ಐಶಾರಮಿ ಹೋಟೆಲ್ ಗೆ ಬರುತ್ತಾರೆ. ಜನಸಮಾನ್ಯರು ಇಲ್ಲಿಗೆ ಬರಲ್ಲ ಅಂತ ಸಿಎಂ ಕುಮಾರಸ್ವಾಮಿಗೆ ಚಾಟಿ ಬೀಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರೋ 2 ದಿನದ ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಜಿಂದಾಲ್ ಗೆ ಕಬ್ಬಿಣದ ಅದಿರು ಯಥೇಚ್ಚವಾಗಿರೋ ಭೂಮಿಯನ್ನು ಮಾರಾಟ ಮಾಡೋಕೆ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಕಿಕ್ ಬ್ಯಾಕ್ ಪಡೆದಿದೆ ಅಂತ ಯಡಿಯೂರಪ್ಪ ಆರೋಪಿಸಿದ್ದಾರೆ.

ಇನ್ನು ಕಮೀಷನ್ ಪಡೆಯೋರು ಮಾತ್ರ ತಾಜ್ ಹೋಟೆಲ್ ಗೆ ಬರುತ್ತಾರೆ. ಜನಸಾಮಾನ್ಯರು ಇಂತಹ ಹೋಟೆಲ್ ಗೆ ಬರಲು ಆಗೋದಿಲ್ಲ ಅಂತ ಬಿಎಸ್ ವೈ ಸಿಎಂ ಕುಮಾರಸ್ವಾಮಿಯವರನ್ನು ಲೇವಡಿ ಮಾಡಿದ್ದಾರೆ. ನಿಮ್ಮ ಖುರ್ಚಿ ಈಗ ಅಲುಗಾಡ್ತಿದೆ. ಕಾಂಗ್ರೆಸ್ ಎಚ್ಚರಿಸಿದ ಮೇಲೆ ಮನೆಯತ್ತ ಶಿಫ್ಟ್ ಆಗ್ತಿರೋ ಸಿಎಂ ಒಂದು ವರ್ಷದ ತಮ್ಮ ಆಡಳಿತದಲ್ಲಿ ಜನ ಸಾಮಾನ್ಯರ ಕೈಗೆ ಸಿಕ್ಕಿದ್ದೀರಾ ಅಂತ ಪ್ರಶ್ನಿಸೋ ಮೂಲಕ ವಾಗ್ದಾಳಿ ನಡೆಸಿದ್ರು.

ತಿಮ್ಮಪ್ಪನ ಸನ್ನಿಧಿಯಲ್ಲಿ ಮಾತನಾಡುವ ಫೋಟೋಗಳು..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Bt4u5SQ6q7s

- Advertisement -

Latest Posts

Don't Miss