- Advertisement -
ಮಂಡ್ಯದ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ನಡೆದ 6ನೇ ವರ್ಷದ ಮಹಾರಥೋತ್ಸವ ಸಮಾರಂಭದಲ್ಲಿಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪರವರಿಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಮರಿದೇವರು ಶಿವಯೋಗಿ ಶ್ರೀ ಸ್ಮರಣೆಯಲ್ಲಿ ದುರ್ದಂಡೇಶ್ವರ ಮಹಂತ ಶಿವಯೋಗಿ ಮಠದ ವತಿಯಿಂದ ಪ್ರದಾನ ಮಾಡಲಾಯಿತು. ಶ್ರೀಗಳ 14ನೇ ವರ್ಷದ ಪುಣ್ಯ ಸ್ಮರಣೆ, 6ನೇ ವರ್ಷದ ಮಹಾರಥೋತ್ಸವ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ವಿವಿಧ ಮಠಾಧೀಶರು ಆಶೀರ್ವದಿಸಿದರು. ಈ ವೇಳೆ ಸಚಿವ ಕೆ.ಸಿ. ನಾರಾಯಣ ಗೌಡ, ಶಾಸಕ ಸಿ.ಎಸ್. ಪುಟ್ಟರಾಜು ಉಪಸ್ಥಿತರಿದ್ದರು.
- Advertisement -