ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನ ಪತನಗೊಳಿಸಿ ಪಟ್ಟಕ್ಕೇರಿದ ಯಡಿಯೂರಪ್ಪ ಖುರ್ಚಿ ಅಲುಗಾಡಲು ಶುರುವಾಗಿದೆ. ಯಡಿಯೂರಪ್ಪ ನಂಬಿ ರಾಜೀನಾಮೆ ನೀಡಿದ 17 ಅನರ್ಹ ಶಾಸಕರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರ್ತಾನೆ ಇಲ್ಲ. ಎರಡು ತಿಂಗಳ ಹಿಂದೆ ಶಾಸಕರ ರಾಜೀನಾಮೆ ಅಂಗೀಕಾರವಾಗದಿದ್ದಾಗ ಕೋರ್ಟ್ ನಲ್ಲಿ ಮುಕುಲ್ ರೋಹಟಗಿ ನಿಮ್ಮನ್ನಅನರ್ಹ ಮಾಡಲು ಸಾಧ್ಯವಿಲ್ಲ, ಮಾಡಿದ್ರೆ 24 ಗಂಟೆಯಲ್ಲಿ ವಾಪಸ್ ತೆಗೆಸ್ತೀನಿ ಅಂತ ಮಾತುಕೊಟ್ಟಿದ್ರು. ಆದ್ರೆ, ಈಗ ರೋಹಟಗಿ ಅನರ್ಹ ಶಾಸಕರ ಪರ ಕೋರ್ಟ್ ಗೆ ಹಾಜರಾಗಲು ಎರಡು ತಿಂಗಳು ತೆಗೆದುಕೊಂಡಿದ್ದಾರೆ.. ಮೂಲಗಳ ಪ್ರಕಾರಅಮಿತ್ ಶಾ – ಮೋದಿ ಗೆ ಯಡಿಯೂರಪ್ಪ ಸರ್ಕಾರ ರಚನೆ ಮಾಡೋದು ಇಷ್ಟವಿರಲಿಲ್ಲ. ಹಠ ಮಾಡಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಮುಂದೆ ಎಲ್ಲಾ ಸರಿ ಹೋಗುತ್ತೆ ಅಂತ ಭಾವಿಸಿದ್ರು. ಆದ್ರೆ, ಅಮಿತ್ ಶಾ- ಮೋದಿ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ.. ಸಿಟ್ಟು ಹೇಗಾದ್ರೂ ಹಾಳಾಗಿ ಹೋಗ್ಲಿ, ಅನರ್ಹ ಶಾಸಕರ ಕೇಸ್ ಕೋರ್ಟ್ ನಲ್ಲಿ ವಿಚಾರಣೆಗೆ ಬಾರದಂತೆ ಅಮಿತ್ ಶಾ ತಡೆದಿದ್ದಾರೆ ಅನ್ನುವ ಮಾತು ಅನರ್ಹ ಶಾಸಕರ ಪಡಸಾಲೆಯಿಂದಲೇ ಕೇಳಿ ಬರ್ತಿದೆ.. ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆ ಈ ತಿಂಗಳ ಕೊನೆಯಲ್ಲಿ ನಡೆಯಲಿದ್ದು ಆ ವೇಳೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಸಿ ಮತ್ತೊಬ್ಬರನ್ನ ಸಿಎಂ ಕುರ್ಚಿಯಲ್ಲಿ ಪ್ರತಿಷ್ಟಾಪನೆ ಮಾಡಲು ಮೋದಿ-ಅಮಿತ್ ಶಾ ಉದ್ದೇಶಿಸಿದ್ದಾರಂತೆ.. ಹೀಗಾಗಿ ಯಡಿಯೂರಪ್ಪ ಕಂಗಾಲಾಗಿ ಹೋಗಿದ್ದಾರೆ.. ಈ ವಿಚಾರ ರಾಜಕೀಯ ಪಡಸಾಲೆಯನ್ನ ಕನ್ಫರ್ಮ್ ಆಗಿರುವ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್, ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿವೆ.. ಅಮಿತ್ ಶಾ- ಮೋದಿಯ ಹಠ ಈಗ ಯಡಿಯೂರಪ್ಪ ಸೀಟಿಗೆ ಸಂಚಕಾರ ತಂದಿದೆ.. ಡಿಕೆ ಶಿವಕುಮಾರ್ ಜೊತೆ ಐಎಂಎ ಹಗರಣದಲ್ಲಿ ಹಲವು ಕಾಂಗ್ರೆಸ್ ನಾಯಕರು ಸಿಬಿಐ ತನಿಖೆ ಹಿನ್ನೆಲೆ ಜೈಲಿಗೆ ಹೋಗೋದು ಕನ್ಫರ್ಮ್ ಆಗ್ತಿದೆ. ಇನ್ನು ಫೋನ್ ಟ್ಯಾಪಿಂಗ್ ಹಗರಣದಲ್ಲಿ ಕುಮಾರಸ್ವಾಮಿ ವಿಲವಿಲ ಅಂತ ಒದ್ದಾಡ್ತಿದ್ದಾರೆ.. ಹೀಗಾಗಿ ಮಹಾರಾಷ್ಟ್ರ ಚುನಾವಣೆಯ ಜೊತೆ ವಿಧಾನಸಭಾ ಚುನಾವಣೆ ನಡೆಸಿ ಈ ವೇಳೆ ಬಿಜೆಪಿಯನ್ನಭಾರೀ ಬಹುಮತದಲ್ಲಿ ಅಧಿಕಾರಕ್ಕೆ ತಂದು ಹೊಸ ಸಿಎಂ ಪ್ರತಿಷ್ಟಾಪನೆ ಮಾಡಲು ಮೋದಿ- ಅಮಿತ್ ಶಾ ಪ್ಲಾನ್ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.. ಮತ್ತೊಂದೆಡೆ ಮತ್ತ್ಒಂದು ಬಾರಿ ಸಿಎಂ ಆಗಲು ಸಿದ್ದರಾಮಯ್ಯ ಸಹ ತಂತ್ರ ರೂಪಿಸ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಆಗಲು ಬಿಡಲ್ಲ ಅನ್ನೋದು ಕಾಂಗ್ರೆಸ್ ನಾಯಕರ ಮಾತು.
ಯಸ್ ನಿಮ್ಮ ಪ್ರಕಾರ ರಾಜ್ಯದಲ್ಲಿ ಈಗ ಚುನಾವಣೆಯಾದರೆ ಯಾವ ಪಕ್ಷ ಗೆಲ್ಲುತ್ತೆ..? ಯಾರು ಸಿಎಂ ಆಗ್ತಾರೆ..? ಕಾಮೆಂಟ್ ಮಾಡಿ..