ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಡಿಯೂರಪ್ಪ ಇಬ್ಬರು ನಾಯಕರಿಗೂ ಹೈಕಮಾಂಡ್ ಎಂಬ ವೇಸ್ಟ್ ನಿಷ್ಪ್ರಯೋಜಕ ನಾಯಕರು ತೊಂದರೆ ಕೊಡ್ತಿದ್ದಾರೆ. ಈ ಇಬ್ಬರಿಗೂ ತೊಂದರೆ ಕೊಟ್ಟು ಕಾಂಗ್ರೆಸ್, ಬಿಜೆಪಿ ಗೆ ಲಾಭವಂತೂ ಸಿಗಲ್ಲ, ನಷ್ಟವೇ ಎಲ್ಲಾ..
ಹೌದು ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುವುದು, ಹೌದು ಈ ರೀತಿಯ ಮಾತು ಯಡಿಯೂರಪ್ಪ ವಿಪಕ್ಷ ನಾಯಕನಾಗಿದ್ದಾಗ ಜನಜನಿತ. ಆಗ ಏನಾದ್ರೂ ಆಗ್ಲಿ ಒಂದ್ ಸಾರಿ ಯಡಿಯೂರಪ್ಪ ಸಿಎಂ ಆಗ್ಬೇಕು ಅನ್ನೋದು ಬಹಳ ಜನರ ನಿರೀಕ್ಷೆ ಆಗಿತ್ತು. ಆದ್ರೆ, ಕುಮಾರಸ್ವಾಮಿ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡಿ ಯಡಿಯೂರಪ್ಪ ಗೆ ಬ್ಯಾಟಿಂಗ್ ಕೊಡದೆ ಯಾಮಾರಿಸಿದ ಪರಿಣಾಮ ನಂತರ ಯಡಿಯೂರಪ್ಪ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ್ರು. ಇದೀಗ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದ್ರೆ ಪ್ರಸ್ತುತ ಯಡಿಯೂರಪ್ಪ ಸ್ಥಿತಿ ನೋಡಿ ವಿರೋಧಿಗಳು ಸಹ ಮರುಕ ಪಡ್ತಿದ್ದಾರೆ. ಬಿಜೆಪಿಯಲ್ಲಿ ವಿರೋಧಿ ಗುಂಪು ಯಡಿಯೂರಪ್ಪ ಹಣಿಯಲು ಪ್ರಯತ್ನ ಪಡ್ತಿದ್ದಾರೆ. ಡೈರೆಕ್ಟಾಗಿ ಹೇಳ್ಬೇಕು ಅಂದ್ರೆ ಬಿಎಸ್ ಗೆ ನೆಮ್ಮದಿಯಾಗಿ, ತನ್ನಿಚ್ಛೆಯಂತೆ ಅಧಿಕಾರ ನಡೆಸಲು ಬಿಡದೆ ಕಿರಿಕ್ ಮಾಡ್ತಿದ್ದಾರೆ. ಯಡಿಯೂರಪ್ಪ ಶಕ್ತಿ ಗೊತ್ತಿದ್ರು ಹೈಕಮಾಂಡ್ ಯಾಕೆ ಸ್ವಂತ ಶಕ್ತಿ ಮೇಲೆ ಎಂಎಲ್ ಎ ಗೆಲ್ಲಲು ಆಗದವರ ಮಾತಿಗೆ ಬೆಲೆ ಕೊಡ್ತಿದೆ ಅನ್ನೋದು ಎಲ್ಲರನ್ನೂ ಕಾಡ್ತಿರುವ ಪ್ರಶ್ನೆ. ಒಂದು ವೇಳೆ ಈ ನಿರ್ಧಾರ ತೆಗೆದುಕೊಂಡ್ರೆ ಬಿಜೆಪಿ ಸರ್ವನಾಶ ಗ್ಯಾರಂಟಿ.. ಅಷ್ಟಕ್ಕೂ ಯಡಿಯೂರಪ್ಪ ಆ ನಿರ್ಧಾರ ಏನು ಅಂತ ನೋಡೋಣ ಅದ್ಕೂ ಮೊದ್ಲು ಈ ವಿಷ್ಯ ನೋಡಿ.
ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಹೆಸರಿನಲ್ಲೆ ಒಂದು ರೀತಿಯ ಪವರ್ ಇದೆ. ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ಬದುಕು ಕಟ್ಟಿಕೊಂಡ ಛಲಗಾರ ಯಡಿಯೂರಪ್ಪ. ನಂತರ ಶಿಕಾರಿಪುರದಲ್ಲಿ ರಾಜಕಾರಣ ಶುರು ಮಾಡಿ ವಿಧಾನಸೌಧದ ಮೆಟ್ಟಿಲು ಹತ್ತಿದ್ಮೇಲೆ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯಾದ್ಯಂತ ಓಡಾಡಿ ಪಕ್ಷವನ್ನ ಅಧಿಕಾರಕ್ಕೆ ತಂದ ನಾಯಕ.. ರಾಜಕಾರಣದಲ್ಲಿ ಹೋರಾಟವನ್ನೇ ಉಸಿರಾಗಿಸಿಕೊಂಡು ಬಿಜೆಪಿಯನ್ನ ರಾಜ್ಯದಲ್ಲಿ ಶಕ್ತಿಯುತವಾಗಿ ಕಟ್ಟಿದ ನಾಯಕ. ಬದುಕಿದ್ದಾಗ ಅನಂತ್ ಕುಮಾರ್ ಒಳಗೊಳಗೆ ಗುನ್ನ ಕೊಟ್ಟು ಬಹಳ ಹಿನ್ನಡೆ ಮಾಡಿರೋದು ಎಲ್ರಿಗೂ ಗೊತ್ತಿರುವ ವಿಷಯವೇ. ಆಗಿಂದ್ದಾಗೆ ಯಡಿಯೂರಪ್ಪ ವಿರುದ್ಧ ಗುಡುಗುವ ಈಶ್ವರಪ್ಪ ಈಗಾಗಲೇ ಯಡಿಯೂರಪ್ಪ ಎದುರು ಹಾಕಿಕೊಂಡು 2013 ರ ಚುನಾವಣೆಯಲ್ಲಿ ಮೂರನೆ ಸ್ಥಾನಕ್ಕೆ ಕುಸಿದಿದ್ರು. 2018ರಲ್ಲಿ ಕಾಡಿಬೇಡಿ ಯಡಿಯೂರಪ್ಪ ಬಳಿ ಟಿಕೆಟ್ ಪಡೆದು ವಿಧಾನಸೌಧ ಮೆಟ್ಟಿಲು ಹತ್ತಿದ್ರು. ಯಡಿಯೂರಪ್ಪ ರಿಂದ ವಿಧಾನ ಮೆಟ್ಟಿಲು ಹತ್ತಿದ ಈಶ್ವರಪ್ಪ ಮತ್ತೆ ಕ್ಯಾತೆ ಶುರು ಮಾಡಿದ್ದಾರೆ. ಇನ್ನು ಅನಂತ್ ಕುಮಾರ್ ಸಾವಿನ ನಂತರ ಸಂತೋಷ್ ಜೀ ಇನ್ನಿಲ್ಲದಂತೆ ಯಡಿಯೂರಪ್ಪ ರನ್ನ ಕಾಡ್ತಿದ್ದಾರೆ. ಸ್ವಂತ ಶಕ್ತಿ ಮೇಲೆ ಪಂಚಾಯ್ತಿ ಚುನಾವಣೆ ಗೆಲ್ಲದ ಯಡಿಯೂರಪ್ಪ ವಿರೋಧಿಗಳಿಗೆ ಪ್ರಬಲ ಹುದ್ದೆ ನೀಡ್ತಿದ್ದಾರೆ. 2013ರಲ್ಲಿ ಕೆಜೆಪಿ ಕಟ್ಟಿ ಚುನಾವಣೆ ಎದುರಿಸಿದ ಯಡಿಯೂರಪ್ಪ 6 ಸ್ಥಾನ ಗಳಿಸಿದ್ರು, ಬಿಜೆಪಿ ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಬಿತ್ತು. ಜೆಡಿಎಸ್ ಗಿಂತ ಬಿಜೆಪಿ ಸ್ಥಾನ ಹೀನಾಯವಾಯ್ತು. ಕೆಜೆಪಿಯಿಂದ ಬಿಜೆಪಿಗೆ ಆದ ಮರ್ಮಾಘಾತ ನೋಡಿದ ಬಿಜೆಪಿ ಹೈಕಮಾಂಡ್ ತತ್ತರಿಸಿ ಹೋಯ್ತು. ಯಡಿಯೂರಪ್ಪ ಶಕ್ತಿ ಅರ್ಥ ಮಾಡಿಕೊಂಡ ಮೋದಿ ಮತ್ತೆ 2014ರ ಲೋಕಸಭಾ ಚುನಾವಣಾ ವೇಳೆಗೆ ಬಿಜೆಪಿಗೆ ವಾಪಸ್ ಕರೆ ತಂದ್ರು. ಆಗ ಬಿಜೆಪಿ ಗೆಲುವು ಸಾಧಿಸಿದ್ದು 17 ಸ್ಥಾನ. ಬಿಜೆಪಿಗೆ ಯಡಿಯೂರಪ್ಪ ವಾಪಸ್ ಬರದೆ ಇದ್ರೆ ಬಿಜೆಪಿ 7 ಸ್ಥಾನ ಬರೋದು ಕಷ್ಟವಾಗಿತ್ತು. ಆಗ ಯಡಿಯೂರಪ್ಪ ಮೋದಿ ಸಂಪುಟದಲ್ಲಿ ಕೃಷಿ ಸಚಿವ ಆಗ್ತಾರೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಅಲ್ಲೂ ಯಡಿಯೂರಪ್ಪ ಗೆ ಮೋಸ ಆಯ್ತು. ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್ ಬಂದ ಯಡಿಯೂರಪ್ಪ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಗೆಲುವು ಸಾಧಿಸಿದ್ರು. ಆದ್ರೆ ಯಡಿಯೂರಪ್ಪ ಎಷ್ಟೆ ಮನವಿ ಮಾಡಿದ್ರು ಜೆಡಿಎಸ್ ಜೊತೆ ಅನಂತ್ ಕುಮಾರ್ ಮಾತು ಕೇಳಿ ಒಳೊಪ್ಪಂದ ಮಾಡಿಕೊಂಡ ಪರಿಣಾಮ ಸ್ವತಂತ್ರ ವಾಗಿ ಅಧಿಕಾರಕ್ಕೆ ಬರೋದು ಕೈತಪ್ಪಿತು. ಯಡಿಯೂರಪ್ಪ ಪುತ್ರನಿಗೆ ವರುಣಾ ಟಿಕೆಟ್ ಕೊಟ್ಟಿದ್ರೆ ವಿಜಯೇಂದ್ರ ಗೆಲುವು ಸಾಧಿಸ್ತಿದ್ರು ಐದು ಸಾವಿರಕ್ಕಿಂತ 10 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿತು. ಯಡಿಯೂರಪ್ಪ ಮಾತಿಗೆ ಬೆಲೆ ಕೊಡದ ಪರಿಣಾಮ ಬಿಜೆಪಿ ಸ್ವತಂತ್ರ ಅಧಿಕಾರಕ್ಕೆ ಬರೋದು ಮಿಸ್ ಆಯ್ತು. ಮತ್ತೆ ಎಷ್ಟೋ ಬಾರಿ ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಲು ಆಗ ಯಡಿಯೂರಪ್ಪ ಮುಂದಾದ್ರೂ ಹೈಕಮಾಂಡ್ ಅನುಮತಿ ಕೊಡಲಿಲ್ಲ ಲೋಕಸಭಾ ಚುನಾವಣೆ ಮುಗಿಲಿ ಅಂತ ಸುಮ್ಮನೆ ಮಾಡಿದ್ರು. ನಂತರ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗಳಿಸ್ತು. ಬಿಜೆಪಿ ಬೆಂಗಳೂರು, ಕರಾವಳಿ ಭಾಗದಲ್ಲಿ ಹೊರತು ಪಡಿಸಿದ್ರೆ ಉಳಿದ 15 ಕ್ಷೇತ್ರಗಳಲ್ಲಿ ಗೆಲ್ಲಲು ಯಡಿಯೂರಪ್ಪ ಕಾರಣ. ಆದ್ರೆ, ಇಷ್ಟೆಲ್ಲಾ ಪಕ್ಷಕ್ಕಾಗಿ ದುಡಿದ ಯಡಿಯೂರಪ್ಪ ಇದೀಗ ಹೆಸರಿಗಷ್ಟೆ ಸಿಎಂ ಆಗಿದ್ದಾರೆ. ಯಡಿಯೂರಪ್ಪ ವಿರುದ್ಧ ಕೆಲಸ ಮಾಡುವ ಪಂಚಾಯ್ತಿ ಗೆಲ್ಲಲು ಶಕ್ತಿ ಇಲ್ಲದ ನಾಯಕರಿಗೆ ನಳೀಲ್ ಕುಮಾರ್ ಮಣೆ ಹಾಕ್ತಿದ್ದಾರೆ. ಯಡಿಯೂರಪ್ಪ ನಿರ್ಲಕ್ಷ್ಯ ಮಾಡಿದ್ರೆ ನಷ್ಟ ಬಿಜೆಪಿಗೆ. ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ. ಬಿಜೆಪಿ ಇಲ್ಲದೆ ಯಡಿಯೂರಪ್ಪ ವಿಧಾನಸಭೆ, ಲೋಕಸಭೆಗೆ ಆಯ್ಕೆಯಾಗುವ ಶಕ್ತಿ ಇದೆ. ಬಿಜೆಪಿ ನಾಯಕರು ಯಡಿಯೂರಪ್ಪ ಅವರಿಗೆ ಗೌರವಯುವ ಬೀಳ್ಕೊಡುಗೆ ಕೊಟ್ರೆ ಬಿಜೆಪಿಗೆ ಮರ್ಯಾದೆ ಉಳಿಯುತ್ತೆ. ಅಮಿತ್ ಶಾ ಕೇವಲ ಯಡಿಯೂರಪ್ಪ ವಿರೋಧಿಗಳ ಮಾತು ಕೇಳಿದ್ರೆ ಕರ್ನಾಟಕದಲ್ಲಿ ಕಮಲ ಕಮರಿ ಹೋಗುವುದರಲ್ಲಿ ಯಾವುದೇ ಡೌಟ್ ಇಲ್ಲ.