Budget News: 2023ನೇ ರಾಜ್ಯದ ಬಜೆಟ್ ನಲ್ಲಿ ಸಿಎಂ ಬಹುವಾಗಿಯೇ ಬೆಂಗಳೂರಿಗೆ ಅನುದಾನಗಳ ಸುರಿಮಾಳೆಯನ್ನು ನೀಡಿದ್ದಾರೆ. ಸುಮಾರು 45 ಸಾವಿರ ಕೋಟಿ ರೂಪಾಯಿಯನ್ನೇ ಬೆಂಗಳೂರಿಗಾಗಿ ಮೀಸಲಿಟ್ಟಿದ್ದಾರೆ.
ಬಜೆಟ್‌ನಲ್ಲಿ ಬೆಂಗಳೂರಿಗೆ ಸುಮಾರು 45 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ ಸಿದ್ದರಾಮಯ್ಯ
ಬೆಂಗಳೂರು ವೈಟ್ ಟಾಪಿಂಗ್ , ರಸ್ತೆ ಅಭಿವೃದ್ದಿ ನಗರೋತ್ಥನ, ರಸ್ತೆ, ತಾಜ್ಯ ನಿರ್ವಾಹಣೆ, ರಾಜಕಾಲುವೆ ತೆರವು ಮತ್ತು ದುರಸ್ಥಿಗೆ 30 ಸಾವಿರ ಕೋಟಿ ರೂ. ಮೆಟ್ರೋ , ಬೆಂಗಳೂರು ಉಪನಗರ ರೈಲು ಯೋಜನೆ, ಬ್ರ್ಯಾಂಡ್ ಬೆಂಗಳೂರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಯೋಜನೆ ನೀಡಿದ್ದಾರೆ.
ತಾಜ್ಯ ನಿರ್ವಾಹಣೆ 1411 ಕೋಟಿ ರೂ. ಮೀಸಲು
ಮೇಟ್ರೋ 3ನೇ ಹಂತದ ಯೋಜನೆಗೆ 16328 ಕೋಟಿ ಯೋಜನ ವೆಚ್ಚ, 45 ಕಿ.ಮೀ ಉದ್ದದ ವಿಸ್ತೃತ ಯೋಜನೆ ವರದಿ ಕೇಂದ್ರ ಸಲ್ಲಿಸಲಾಗುವುದು.
ಬೈಯಪ್ಪನಹಳ್ಳಿಯಲ್ಲಿ ಮೇಲು ಸೇತುವೆ ನಿರ್ಮಾಣಗೆ 263 ಕೋಟಿ ರೂ.
ಬೆಂಗಳೂರು ಸಂಚಾರ ದಟ್ಟಣೆ ನಿರ್ವಾಹಣೆಗೆ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಪ್ಲ್ಯಾನ್.
ಮಳೆ ಅನಾಹುತ ತಪ್ಪಿಸಲು ರಾಜಕಾಲುವೆ ಒತ್ತುವರಿ ತೆರವು.
ಹೀಗೆ ಬೆಂಗಳೂರಿಗರ ಪಾಲಿಗೆ ಇದೊಂದು ಚಿನ್ನದ ಬಜೆಟ್ ಎಂದರೂ ತಪ್ಪಾಗಲಾರದು. ಇಷ್ಟೂ ಯೋಜನೆಗಳೂ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಬೆಂಗಳೂರು ಮತ್ತಷ್ಟು ಬೆಳಗುವುದರಲ್ಲಿ ಯಾವುದೇ ಸಂದೇಹವಿಲ್ಲ.