- Advertisement -
ಬಜೆಟ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಏನೇನು ಸಿಕ್ಕಿದೆ?
ಕನ್ನಡ ತಾರೆಯರೊಂದಿಗೆ ಒಡನಾಡ ಹೊಂದಿರುವ ಸಿಎಂ ಬಜೆಟ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಉತ್ತಮ ಕೊಡುಗೆ ನೀಡಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.
ಸಬ್ಸಿಡಿ, ಮಿನಿ ಥಿಯೇಟರ್‌ಗಳ ಸ್ಥಾಪನೆ ಬಜೆಟ್‌ನಲ್ಲಿ ಹೇಳಿದ್ದು, ಬಿಟ್ಟರೆ, ಬಹಳ ದಿನಗಳ ಬೇಡಿಕೆಯನ್ನು ಅವರು ಈಡೇರಿಸಿಲ್ಲ. ದಿವಂಗತ ನಟ, ನಿರ್ದೇಶಕ ಶಂಕರ್‌ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ಸ್ಟ್ಯಾಂಡ್‌ಗಳನ್ನು ರಾಜ್ಯಾದ್ಯಂತ ನಿರ್ಮಾಣ ಮಾಡುವುದಾಗಿ ಉಲ್ಲೇಖ ಮಾಡಲಾಗಿದೆ.
ಟೈರ್ 2 ಏರಿಯಾಗಳಲ್ಲಿ ಕೆಲವೆಡೆ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಈ ಸಂಬಂಧ ರಾಜ್ಯ ಟೈರ್ 2 ಏರಿಯಾಗಳಲ್ಲಿ 100 ರಿಂದ 200 ಆಸನವುಳ್ಳ ಮಿನಿ ಥಿಯೇಟರ್‌ಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹ ನೀಡುವುದಾಗಿ ಹೇಳಲಾಗಿದೆ.
- Advertisement -