Sunday, April 20, 2025

Latest Posts

ಕಟ್ಟಡದ ಕಿಟಕಿಗೆ ಸಿಲುಕಿ ನರಳಾಡಿದ ಹದ್ದು

- Advertisement -

ಮಂಡ್ಯ: ಕಟ್ಟಡದ ಕಿಟಕಿಗೆ ಸಿಲುಕಿ ಹದ್ದೊಂದು ರಾತ್ರಿಯಿಡಿ ನರಳಾಡಿತ್ತು. ಹಕ್ಕಿಯ ಮೂಕರೊಧನೆ ಕೇಳುವವರು ಯಾರು ಇರಲಿಲ್ಲ. ಇಡೀ ರಾತ್ರಿ ಹದ್ದು ನರಳುತ್ತಾ ನನ್ನ ಜೀವ ಉಳಿಸಿ ಎಂಬಂತೆ ಅರಚುತ್ತಿತ್ತು. ಹಾರಾಡೊ ಹಕ್ಕಿಗೆ ರೆಕ್ಕೆನೆ ಮೂಲ ಆಧಾರ. ಅದೇ ರೆಕ್ಕೆಗೆ ಕುತ್ತು ಬಂದರೆ ಮೂಕ ಪಕ್ಷಿ ಹಾರುವುದಾದರೂ ಹೇಗೆ?

ಕಟ್ಟಡದ ಕಿಟಕಿಗೆ ಸಿಲುಕಿ ಹದ್ದೊಂದು ರಾತ್ರಿಯಿಡಿ ನರಳಾಡಿದೆ. ಮಂಡ್ಯ ನಗರದ ವಿನೋಬ ರಸ್ತೆಯಲ್ಲಿ ಘಟನೆ ನಡೆದಿದ್ದು, ರಾತ್ರಿಯಿಂದ ಹದ್ದು ತಲೆಕೆಳಗಾಗಿ ನರಳಾಡುತ್ತಿತ್ತು. ಬೆಳಗ್ಗೆ ಹದ್ದಿನ ನರಳಾಟ ಗಮನಿಸಿದ್ದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಉಪ ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಹದ್ದನ್ನು ರಕ್ಷಿಸಿದ್ದಾರೆ. ಕಟ್ಟಡದ ಮೇಲ್ಭಾಗದ ಕಿಟಕಿಯ ಬಳಿ ತೆರಳಿ ಕಿಟಕಿ ತೆರೆಯುತ್ತಿದ್ದಂತೆ ರಾತ್ರಿಯಿಡಿ ನರಳಾಡಿದ್ದ ಹದ್ದು ಹಾರಿ ಹೋಗಿದೆ.

ಡಿಸೆಂಬರ್ ಅಂತ್ಯದೊಳಗೆ 1 ಕೋಟಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಮೀಜೋರಾಂ ಕಲ್ಲಿನ ಕ್ವಾರಿ ಕುಸಿತದಲ್ಲಿ 8 ವಲಸೆ ಕಾರ್ಮಿಕರು ಸಾವು, 4 ಜನ ಸಿಕ್ಕಿಬಿದ್ದಿರುವ ಶಂಕೆ

- Advertisement -

Latest Posts

Don't Miss