ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಸಭಾಭವನವನ್ನು ಮೇಯರ್ ವೀಣಾ ಭರದ್ವಾಡ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ವಿಪಕ್ಷ ನಾಯಕಿ ಸುವರ್ಣ ಕಲಕುಂಟ್ಲ ನೆರವೇರಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಸಭಾಭವನ ಸುಮಾರು 48ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತ ಸಭಾಭವನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈಗಾಗಲೇ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಭಾಭವನವನ್ನು ಸಾಮಾನ್ಯ ಸಭೆಯ ಆರಂಭಕ್ಕೂ ಮುನ್ನವೇ ಚಾಲನೆ ನೀಡಲಾಯಿತು.
ಇನ್ನೂ 82 ಪಾಲಿಕೆ ಸದಸ್ಯರ ಆಸನಕ್ಕೆ, ಮೇಯರ್, ಉಪಮೇಯರ್, ಪಾಲಿಕೆ ಅಧಿಕಾರಿಗಳ ಆಸನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಮಾಧ್ಯಮದವರಿಗೂ ಕೂಡ ವಿಶೇಷ ಆಸನದ ವ್ಯವಸ್ಥೆ ಮಾಡಿದ್ದು, ಸಾಮಾನ್ಯಸಭೆಯ ಸಭಾಭವನ ಝಗಮಿಸಿರುವುದು ವಿಶೇಷವಾಗಿದೆ.
Ashok Gehloth: ಗೃಹಲಕ್ಷ್ಮಿ ಯೋಜನೆಗೆ ಶುಭಾಶಯ ಕೋರಿದ ರಾಜಸ್ತಾನದ ಸಿಎಂ..!
DKS-Tweet: ಗೃಹಲಕ್ಷ್ಮಿ ಯೋಜನೆ ಜಾರಿ ಕುರಿತು ಖುಷಿ ವ್ಯಕ್ತಪಡಿಸಿದ ಡಿಸಿಎಂ..!

