ಇತ್ತೀಚೆಗೆ ಅನೇಕ ವಸ್ತುಗಳ ಬೆಲೆ ಏರಿಕೆ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿಗೆ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿತ್ತು. GST ದರ ಏರಿಕೆಯಿಂದ ತತ್ತರಿಸಿ ಹೋಗಿದ್ರು. ಆದ್ರೆ ಈಗ ‘ನಂದಿನಿ’ ಉತ್ಪನ್ನ ಬಳಕೆದಾರರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ GST ದರವನ್ನು ಶೇಕಡಾ 12 ರಿಂದ 5ಕ್ಕೆ ಇಳಿಸುವ ಪರಿಕಲ್ಪನೆಯಲ್ಲಿ ಇದೆ. ಇದರ ಪರಿಣಾಮವಾಗಿ ನಂದಿನಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಹಲವಾರು ಉತ್ಪನ್ನಗಳ ದರ ಶೀಘ್ರದಲ್ಲೇ ಇಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 19 ರಂದು ‘ನಂದಿನಿ’ ಉತ್ಪನ್ನಗಳನ್ನು ತಯಾರಿಸುವ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ ಉನ್ನತ ಅಧಿಕಾರಿಗಳ ಸಭೆ ನಡೆಯಲಿದೆ. ಬರುವ ಸೋಮವಾರ ಸೆಪ್ಟೆಂಬರ್ 22 ರಿಂದಲೇ ದರ ಇಳಿಕೆ ಜಾರಿಗೆ ಬರುವ ಸಾಧ್ಯತೆ ಇದೆ. ಈ ಬಗ್ಗೆ KMF ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿದ್ದಾರೆ.
ಸೆಪ್ಟೆಂಬರ್ 22ರಿಂದ ನಂದಿನಿ ಉತ್ಪನ್ನಗಳ ದರ ಶೇಕಡಾ 7ರಷ್ಟು ಇಳಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹಾಲು ಹಾಗೂ ಹಾಲಿನ ಉತ್ಪನ್ನಗಳ GST ದರ ಇಳಿಕೆ ಪರಿಣಾಮ, ಮೊಸರು ಲೀಟರ್‌ಗೆ ₹4 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದು ಮಧ್ಯಮ ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. 2017ರಲ್ಲಿ ಹಾಲು ಉತ್ಪನ್ನಗಳ ಮೇಲೆಯೂ GST ವಿಧಿಸಲಾಗಿತ್ತು. 2022 ರಲ್ಲಿ ಈ ತೆರಿಗೆಯನ್ನು ಶೇಕಡಾ 12ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ GST ದರವನ್ನು ಶೇಕಡಾ 5ಕ್ಕೆ ಇಳಿಸಲು ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಆರ್ಥಿಕ ಹೊರೆ ಸ್ವಲ್ಫ ಕಡಿಮೆಯಾಗಲಿದೆ.
‘ನಂದಿನಿ’ ಬೆಲೆ ಇಳಿಕೆಯಾಗುವ ಬೆಳವಣಿಗೆಯ ನಡುವೆ, ‘ಅಮೂಲ್’ ಬ್ರ್ಯಾಂಡ್‌ನ ಹಾಲು ಬೆಲೆಯಲ್ಲೂ ಇಳಿಕೆ ಆಗುತ್ತಾ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಕುರಿತು GCMMF ನ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ. ಅಮೂಲ್ ಪೌಚ್ ಹಾಲು GST ಗೆ ಒಳಪಟ್ಟಿರಲಿಲ್ಲ. ಹೀಗಾಗಿ, ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ.
‘ನಂದಿನಿ’ ಬಳಕೆದಾರರಿಗೆ ಬೆಲೆ ಇಳಿಕೆ ಮೂಲಕ ಸರ್ಕಾರದಿಂದ ಹಾಗೂ KMF ನಿಂದ ಇಳಿಸಬಹುದಾದ ದರಗಳು ಸ್ವಾಗತಾರ್ಹವಾದ ಹೆಜ್ಜೆಯಾಗಿದೆ. ಸೆಪ್ಟೆಂಬರ್ 22ರಿಂದ ಈ ಇಳಿಕೆ ಜಾರಿಯಾದರೆ, ಜನತೆಗೆ ದೈನಂದಿನ ಖರ್ಚುಗಳಲ್ಲಿ ಶಮನ ಸಿಗುವ ನಿರೀಕ್ಷೆಯಿದೆ.
ವರದಿ : ಲಾವಣ್ಯ ಅನಿಗೋಳ