Thursday, April 17, 2025

Latest Posts

ಕೊರೊನಾ ಲಸಿಕೆ ಹಾಕಿಸಿದ್ರೆ ಬಂಪರ್ ಆಫರ್..!

- Advertisement -

www.karnatakatv.net: ಕೊರೊನಾ ಲಸಿಕೆಯನ್ನು ಹಾಕಿಸಿದ್ರೆ ಟಿವಿ ಸೆಟ್, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ ಗೆಲ್ಲುವದಾಗಿ ಮಣಿಪುರದ ಇಂಪಾಲ್ ಪೂರ್ವ ಜುಲ್ಲೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ.


ಹೌದು.. ಕೊರೊನಾ ಮಹಾಮಾರಿ ಯಿಂದ ಜನರು ತತ್ತರಿಸಿ ಹೋಗಿದ್ದಾರೆ ಅದನ್ನು ನಿಯಂತ್ರಿಸಲು ಲಸಿಕೆಯನ್ನು ಹಾಕುವುದಾಗಿ ತಿಳಿಸಿದ್ದಾಎ ಆದರೆ ಕೆಲವೆಡೆ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಆದಕಾರಣ ಲಸಿಕೆ ನೀಡುವಿಕೆಯನ್ನು ಹೆಚ್ಚಿಸುವ ಉದ್ದೇಶ ದಿಂದ ಅ.24, 31 ಮತ್ತು ನ.7 ರಂದು ಜಿಲ್ಲೆಯ 3 ಕೇಂದ್ರಗಳಲ್ಲಿ ‘ಲಸಿಕೆ ಪಡೆದು ಬಹುಮಾನ ಗೆಲ್ಲಿರಿ’ಘೊಷಣೆಯೊಂದಿಗೆ ಮೆಗಾ ಲಸಿಕೆ ನೀಡಿಕೆ ಕಮ್ ಬಂಪರ್ ಡ್ರಾ ಕಾರ್ಯಕ್ರಮವನ್ನು ಆಯೋಜಿಸಲು ಇಂಪಾಲದ ಪೂರ್ವ ಜಿಲ್ಲಾಡಳಿತ ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಈ ಸಂಬoಧ ಅಧಿಸೂಚನೆ ಹೊರಡಿಸಿರುವ ಜಿಲ್ಲಾಧಿಕಾರಿ ಟಿ.ಹೆಚ್. ಕಿರಣ್ ಕುಮಾರ್, ಮೂರು ಕೇಂದ್ರಗಳಲ್ಲಿ ಲಸಿಕೆ ಪಡೆದವರು, ಬಂಪರ್ ಡ್ರಾದಲ್ಲಿ ಪಾಲ್ಗೊಂಡು ಬಹುಮಾನ ಗೆಲಲ್ಲು ಅವಕಾಶವಿದೆ ಎಂದು ಹೇಳಿದ್ದಾರೆ. ಮೊದಲ ಬಹುಮಾನವಾಗಿ ದೊಡ್ಡ ಪರದೆಯ ಟಿವಿ ಸೆಟ್, ಎರಡನೇ ಬಹುಮಾನವಾಗಿ ಮೊಬೈಲ್ ಫೋನ್ ಹಾಗೂ ಮೂರನೇ ಬಹುಮಾನವಾಗಿ ಬ್ಲಾಂಕೆಟ್ ಮತ್ತಿತರ ಸಮಾಧಾನಕಾರ ಬಹುಮಾನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಮೊದಲ ಹಾಗೂ ಎರಡನೇ ಡೋಸ್ ಕೋವಿಡ್-19 ಲಸಿಕೆ ಪಡೆಯದ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಲಕ್ಕಿ ಡ್ರಾನಲ್ಲಿ ಪಾಲ್ಗೊಂಡು, ಬಹುಮಾನ ಗೆಲ್ಲಲು ಅರ್ಹರಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

- Advertisement -

Latest Posts

Don't Miss