Thursday, November 27, 2025

Latest Posts

ಗ್ರಾಹಕರಿಗೆ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ..!

- Advertisement -

www.karnatakatv.net: ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನನವಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೆಟ್ರೋಲ್ ಬಂಕ್ ಮಾಲೀಕನೊಬ್ಬ ತನ್ನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ವಿತರಿಸಿದ್ದಾರೆ.

ಮಾತುಬಾರದ ಶ್ರವಣದೋಷವೂ ಇರೋ ತಮ್ಮ ಅಣ್ಣನ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಅನ್ನೋ ವಿಚಾರ ತಿಳಿದು ಸಂತೋಷಗೊoಡ ರಾಜೇಂದ್ರ ಸೈನಾನಿ, ಬೇತಲ್ ನಲ್ಲಿನ ತಮ್ಮ ಪೆಟ್ರೋಲ್ ಬಂಕ್ ನಲ್ಲಿ ಅಂದು ತನ್ನೆಲ್ಲಾ ಗ್ರಾಹಕರಿಗೂ ಶೇಕಡಾ 10 ರಷ್ಟು ಪೆಟ್ರೋಲ್ ಹೆಚ್ಚುವರಿಯಾಗಿ ನೀಡಿದ್ದಾರೆ.

ಇನ್ನು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ರೆ ಶೇಕಡಾ ೫ ರಷ್ಟು ಮತ್ತು 200 ರಿಂದ 500 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡವರಿಗೆ ಶೇಕಡಾ 10 ರಷ್ಟು ಉಚಿತ ಪೆಟ್ರೋಲ್ ಹಾಕಲಾಗಿದೆ. ಇನ್ನು ಪೆಟ್ರೋಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿರೋ ಮಧ್ಯೆಯೂ ಈ ಪೆಟ್ರೋಲ್ ಬಂಕ್ ಮಾಲೀಕನ ನಡೆ ಗ್ರಾಹಕರಲ್ಲಿ ಸಂತಸ ಮೂಡಿಸಿತ್ತು.

- Advertisement -

Latest Posts

Don't Miss