Mumbai News:
ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ ಹಾಗೂ ಇಸ್ಲಾಮಿಕ್ ಸಂಪ್ರದಾಯವನ್ನು ಅನುಸರಿಸಿದ ಆರೋಪದ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಹಿಂದೂ ಸಮುದಾಯದ ತನ್ನ ಪತ್ನಿ ಗಂಟಲನ್ನು ಸೀಳಿ ಹತ್ಯೆ ಮಾಡಿದ್ದಾನೆ. ಮುಂಬೈನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಕ್ಬಾಲ್ ಮೊಹಮ್ಮದ್ ಶೇಖ್ (36) ಎಂಬಾತ ಪತ್ನಿ ರುಪಾಲಿ ಚಂದನಶಿವೆ (20)ಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಇಕ್ಬಾಲ್ ಸೋಮವಾರ ರಾತ್ರಿ ತನ್ನ ಕೊಲೆ ಮಾಡಿದ್ದಾರೆ. ಆರೋಪಿ ಇಕ್ಬಾಲ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ರೂಪಾಲಿ ಹಾಗೂ ಟ್ಯಾಕ್ಸಿ ಡ್ರೈವರ್ ಆಗಿದ್ದ ಇಕ್ಬಾಲ್ ಶೇಖ್ ಹಲವು ರ‍್ಷಗಳಿಂದ ಪ್ರೀತಿ ಮಾಡುತ್ತಿದ್ದು ಮೂರು ರ‍್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಅದಾದ ಬಳಿಕ, ರೂಪಾಲಿ ಚೆಂಬೂರ್ ಪ್ರದೇಶದಲ್ಲಿದ್ದ ಇಕ್ಬಾಲ್‌ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು. ಇವರಿಬ್ಬರಿಗೆ ೨ ವರ್ಷದ ಪುತ್ರನಿದ್ದಾನೆ.
ವಿವಾಹದ ಬಳಿಕ ಜಾರಾ ಎಂದು ಹೆಸರು ಬದಲಿಸಿಕೊಂಡಿದ್ದಳು. ರೂಪಾಲಿಗೆ ಮುಸ್ಲಿಂ ಸಂಪ್ರದಾಯವನ್ನು ಪಾಲಿಸುವಂತೆ ಹಾಗೂ ಬುರ್ಖಾ ಧರಿಸುವಂತೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಇದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ರೂಪಾಲಿ ಮನೆ ತೊರೆದು ಕಳೆದ ಕೆಲ ತಿಂಗಳಿಂದ ಪ್ರತ್ಯೇಕವಾಗಿ ನೆಲೆಸಿದ್ದರು.
ಮಗನ ಕಸ್ಟಡಿಯ ಕುರಿತು ಜಗಳವಾದಾಗ ಪತ್ನಿ ಕತ್ತು ಸೀಳಿ ಆಕೆಯ ಕೈಗಳನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಕೃತ್ಯ ಎಸಗಿದ ಬಳಿಕ ಇಕ್ಬಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಲಕ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಲಾಸ್ ರಾಥೋಡ್ ತಿಳಿಸಿದ್ದಾರೆ ಎನ್ನಲಾಗಿದೆ.
“ಪಿಎಫ್‌ಐ ನಿಷೇಧದ ಕೇಂದ್ರ ಸರಕಾರದ ಆದೇಶವನ್ನು ನಾನು ಸ್ವಾಗತಿಸುತ್ತೇನೆ”: ಆರಗ ಜ್ವಾನೇಂದ್ರ
ಜಿಲ್ಲೆಯಲ್ಲಿ ಮಹಾ ಕುಂಭ ಮೇಳದ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಿ: ಗೋಪಾಲಯ್ಯ ಕೆ