Thursday, August 28, 2025

Latest Posts

ಬುರುಡೆ ಗ್ಯಾಂಗ್‌ ವಿರುದ್ಧ 10 ಸೆಕ್ಷನ್‌ಗಳಡಿ ಕೇಸ್!

- Advertisement -

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿದ್ದ ನಿಗೂಢ ಸಾವುಗಳ ಪ್ರಕರಣ, ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಆದ್ರೀಗ ಎಸ್‌ಐಟಿ ತನಿಖೆಯ ಸ್ಟೈಲ್‌, ಪ್ರಕರಣದ ದಿಕ್ಕನ್ನ ಸಂಪೂರ್ಣವಾಗಿ ಬದಲಿಸಿದೆ. ಪ್ರಾಥಮಿಕವಾಗಿ ದೂರುದಾರನಾಗಿದ್ದ ಚಿನ್ನಯ್ಯನೇ, ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ. ಆದ್ರೀಗ ಇಡೀ ಪ್ರಕರಣದಲ್ಲಿ ಬೇರೆವರ ಕೈವಾಡ ಇರೋದು ಬಯಲಾಗಿದೆ. ಸುಳ್ಳು ಸಾಕ್ಷಿ, ಕೃತಕ ದಾಖಲೆಗಳು ಹಾಗೂ ಷಡ್ಯಂತ್ರದತ್ತ ಪ್ರಕರಣ ವಾಲುತ್ತಿದೆ.

ಎಸ್‌ಐಟಿ ಸಲ್ಲಿಸಿದ ವರದಿಯ ಪ್ರಕಾರ, ಚಿನ್ನಯ್ಯ ನೀಡಿದ ದೂರಿನಲ್ಲಿ ಅವ್ಯವಹಾರದ ನಿರ್ದಿಷ್ಟ ಪುರಾವೆಗಳಿಲ್ಲದಿರುವುದು ಮತ್ತು ಕೃತಕ ದಾಖಲೆಗಳ ಮೂಲಕ ತಪ್ಪು ಮಾಹಿತಿ ನೀಡಿದ್ದಾನೆ ಎಂಬುದು ಬಹಿರಂಗವಾಗಿದೆ. ನ್ಯಾಯಾಲಯದ ಅನುಮತಿಯೊಂದಿಗೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಎಸ್‌ಐಟಿ BNS ಅಡಿಯಲ್ಲಿ ಪ್ರಮುಖ ಸೆಕ್ಷನ್‌ಗಳನ್ನು ಜಾರಿಗೆ ತಂದಿದೆ. ಹಾಗಾದ್ರೆ ಯಾವ್ಯಾವ ಸೆಕ್ಷನ್ ಗೆ ಏನೇನು ಶಿಕ್ಷೆ ಅನ್ನೋದನ್ನ ನೋಡೋದಾದ್ರೆ

gfx :
header : BNS 336 – ಕೃತಕ ದಾಖಲೆ
ಸಾಮಾನ್ಯ ಫೋರ್ಜರಿ – ಗರಿಷ್ಠ 2 ವರ್ಷ ಜೈಲು ಅಥವಾ ದಂಡ
ಮೋಸದ ಉದ್ದೇಶ – ಗರಿಷ್ಠ 7 ವರ್ಷ ಜೈಲು, ದಂಡ
ಕೀರ್ತಿ ಹಾನಿ ಮಾಡುವ ಉದ್ದೇಶ – ಗರಿಷ್ಠ 3 ವರ್ಷ ಜೈಲು, ದಂಡ

(gfx v/o : BNS 336 – ಕೃತಕ ದಾಖಲೆ ಅಂದ್ರೆ Forgery ಗೆ ಸಂಬಂಧಪಟ್ಟಂತೆ ಸಾಮಾನ್ಯ Forgery ಮಾಡೋದು ಈ ಅಪರಾಧಕ್ಕೆ ಗರಿಷ್ಠ 2 ವರ್ಷ ಜೈಲು ಅಥವಾ ದಂಡ, ಮೋಸದ ಉದ್ದೇಶದಿಂದ ಮಾಡಿದ್ರೆ ಗರಿಷ್ಠ 7 ವರ್ಷ ಜೈಲು ಮತ್ತು ದಂಡ, ಹೆಸರು ಹಾಳು ಮಾಡುವ ಉದ್ದೇಶದಿಂದ ಮಾಡಿದ್ರೆ ದಂಡ ಮತ್ತು ಗರಿಷ್ಠ 3 ವರ್ಷ ಜೈಲು ಶಿಕ್ಷೆಯಾಗತ್ತೆ. )

gfx :
BNS 227, 248 : ಸುಳ್ಳು ಸಾಕ್ಷಿ, ಅಪರಾಧಗಳು
BNS 227 : ಸುಳ್ಳು ಸಾಕ್ಷಿ ನೀಡುವುದು
BNS 228 : ಸುಳ್ಳು ದಾಖಲೆ ಸೃಷ್ಟಿ
BNS 229 : ಗರಿಷ್ಠ 7 ವರ್ಷ ಜೈಲು, ₹10,000 ದಂಡ
BNS 230 : ಆಜೀವ ಶಿಕ್ಷೆ ಅಥವಾ ಮರಣದಂಡನೆ
BNS 231, 237 : ಸುಳ್ಳು ಸಾಕ್ಷಿಗೆ ಬೆದರಿಕೆ, ಸುಳ್ಳು ಪ್ರಮಾಣಪತ್ರಕ್ಕೆ ಶಿಕ್ಷೆ
BNS 238 : ಸಾಕ್ಷಿ ನಾಶಪಡಿಸುವುದು, ಗರಿಷ್ಠ 7 ವರ್ಷ ಜೈಲು, ದಂಡ

(gfx v/o ) : ಸೆಕ್ಷನ್ 227, 248 ರ ಅಡಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಿ, ಅಪರಾಧಗಳು ಅನ್ನೋದನ್ನ ಹೇಳತ್ತೆ. ಸೆಕ್ಷನ್ 227, 228, 229 ಸುಳ್ಳು ಸಾಕ್ಷಿ ನೀಡುವುದು, ಸುಳ್ಳು ದಾಖಲೆ ಸೃಷ್ಟಿ ಮಾಡೋದನ್ನ ಮಾಡಿದ್ರೆ ಗರಿಷ್ಠ 7 ವರ್ಷ ಜೈಲು + ₹10,000 ದಂಡ ವಿಧಿಸಲಾಗತ್ತೆ. ಸೆಕ್ಷನ್ 230 ರ ಅಡಿ ಮರಣದಂಡನೆ, ಅದೇ ರೀತಿ ಸೆಕ್ಷನ್ 231–237 ರವರೆಗೆ ಸುಳ್ಳು ಸಾಕ್ಷಿಗೆ ಬೆದರಿಕೆ, ಸುಳ್ಳು ಪ್ರಮಾಣಪತ್ರಕ್ಕೆ ಶಿಕ್ಷೆ, ಸೆಕ್ಷನ್ 238 ಸಾಕ್ಷಿ ನಾಶಪಡಿಸುವ ಪ್ರಯತ್ನ ಮಾಡಿದ್ರೆ ಗರಿಷ್ಠ 7 ವರ್ಷ ಜೈಲು + ದಂಡ ಹೀಗೆ ಈ ರೀತಿ ಕೆಲವೊಂದು ಸೆಕ್ಷನ್ ಗಳನ್ನ ಹಾಕೊಂಡು SIT ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. )

ಎಸ್‌ಐಟಿ ನೀಡಿರುವ ಮಾಹಿತಿ ಪ್ರಕಾರ, ಈ ಪ್ರಕರಣದ ಹಿಂದೆ ಸಮಾಜದಲ್ಲಿ ಆತಂಕ ಉಂಟು ಮಾಡಲು ಹಾಗೂ ರಾಜಕೀಯ/ಸಾಮಾಜಿಕ ಲಾಭ ಪಡೆಯಲು ನಡೆಸಲಾದ ರೂಪುರೇಷೆಯ ಷಡ್ಯಂತ್ರ ಇದೆ ಎಂಬುದು ಸ್ಪಷ್ಟವಾಗಿದೆ. ಚಿನ್ನಯ್ಯ ಹಾಗೂ ಸಂಬಂಧಿತ ವ್ಯಕ್ತಿಗಳ ವಿರುದ್ಧ ತನಿಖೆ ತೀವ್ರಗೊಂಡಿದೆ.

- Advertisement -

Latest Posts

Don't Miss