ಸೌಜನ್ಯ ಮಾವನ ಬುಡಕ್ಕೆ ಬುರುಡೆ ಕೇಸ್!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿದ್ದ ನಿಗೂಢ ಸಾವುಗಳ ಕೇಸ್‌ಗೆ, ಬೇರೆಯದ್ದೇ ತಿರುವು ಸಿಕ್ಕಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿರುವ ಅನುಮಾನ ಮೂಡಿದ್ದು, ಬುರುಡೆ ಗ್ಯಾಂಗ್‌ ಲಾಕ್‌ ಆಗಿದೆ. ಎಸ್‌ಐಟಿ ತನಿಖೆ ತೀವ್ರಗೊಂಡಿದ್ದು, ಪ್ರತಿಯೊಂದು ಆಯಾಮಗಳನ್ನು ಪರಿಶೀಲನೆ ಮಾಡಿದೆ.

ಚಿನ್ನಯ್ಯ, ಮಟ್ಟಣ್ಣವರ್‌, ತಿಮರೋಡಿ, ಟಿ. ಜಯಂತ್‌, ಯೂಟ್ಯೂಬರ್ಸ್‌ ಬಳಿಕ ಮತ್ತೊಬ್ಬರ ಲಿಂಕ್‌ ಇರೋದು ಬಯಲಾಗಿದೆ. ಸೌಜನ್ಯ ಮಾವ ವಿಠಲಗೌಡ ಕೈವಾಡವಿದೆಯಂತೆ. ಎಸ್‌ಐಟಿ ವಿಚಾರಣೆ ವೇಳೆ, ಗಿರೀಶ್‌ ಮಟ್ಟಣ್ಣವರ್ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಉಜಿರೆ ಗ್ರಾಮ ಪಂಚಾಯಿತಿಯಲ್ಲಿ ಕೆಲ ತಿಂಗಳ ಕಾಲ ಕೆಲಸ ಮಾಡ್ತಿದ್ದ ಚಿನ್ನಯ್ಯನಿಗೆ, ಸೌಜನ್ಯ ಮಾವ ವಿಠಲ್‌ ಗೌಡರಿಂದಲೇ, ಬುರುಡೆ ಗ್ಯಾಂಗಿನ ಪರಿಚಯವಾಗಿತ್ತಂತೆ.

ಕಾಡಿನಿಂದ ಬುರುಡೆ ತಂದುಕೊಟ್ಟಿದ್ದೆ ವಿಠಲ ಗೌಡ. 11 ಎ ಸ್ಪಾಟ್‌ನ ಸ್ವಲ್ಪ ದೂರದಲ್ಲೇ ತಲೆಬುರುಡೆ ಸಿಕ್ಕಿತ್ತಂತೆ. ನೇತ್ರಾವತಿ ಸ್ನಾನಘಟ್ಟ ಸಮೀಪದ ಬಂಗ್ಲಗುಡ್ಡ ಕಾಡಿನಿಂದ ತರಲಾಗಿತ್ತಂತೆ. ವಿಠಲ್‌ ಗೌಡ ಜೊತೆ ಪ್ರದೀಪ್‌ ಎಂಬಾತ ಕೂಡ ಹೋಗಿದ್ದ ಎನ್ನಲಾಗಿದೆ. ಸೆಪ್ಟೆಂಬರ್‌ 6ರಂದೇ ವಿಠಲ ಗೌಡ, ಪ್ರದೀಪ್‌ನನ್ನ ಕರೆದುಕೊಂಡು ಹೋಗಿ, ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಬುರುಡೆ ಸಿಕ್ಕ ಜಾಗದ ಮಣ್ಣಿನ ಸ್ಯಾಂಪಲ್‌ ಸಂಗ್ರಹಿಸಿ, ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಇನ್ನು ಇಡೀ ರಾತ್ರಿ ಎಸ್‌ಐಟಿ ಠಾಣೆಯಲ್ಲಿ ವಿಠಲ್‌ ಗೌಡನನ್ನ ಇರಿಸಿಕೊಂಡಿದ್ದು, ವಿಚಾರಣೆ ನಡೆಸಲಾಗಿದೆ.

About The Author