ಬುರುಡೆ ರಹಸ್ಯ ಬಟಾ ಬಯಲು – ಯುಟ್ಯೂಬರ್‌ ಮನಾಫ್ ಯಾರು?

ಧರ್ಮಸ್ಥಳ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 8 ಸ್ವಾಮೀಜಿಗಳ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದೆ. ಪ್ರಕರಣವನ್ನು NIAಗೆ ಹಸ್ತಾಂತರಿಸುವಂತೆ ಮನವಿ ಮಾಡಿದೆ. ಇದಾದ ಬಳಿಕ ಎಸ್​​ಐಟಿ, ಕೇರಳ ಮೂಲದ ಯೂಟ್ಯೂಬರ್ ಮನಾಫ್‌​​ಗೆ ನೋಟಿಸ್​ ನಿಡಿದೆ.

ಕೇರಳ ಮೂಲದ ಮನಾಫ್ ಒಬ್ಬ ಯೂಟ್ಯೂಬರ್‌. ಬುರುಡೆ ಪ್ರಕರಣ ಆರಂಭವಾದಾಗಿನಿಂದಲೇ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಸಾಕಷ್ಟು ವಿಡಿಯೋಗಳನ್ನ ಹಾಕುತ್ತಿದ್ದ. ಈಗ ವಿವಿಧ ಕಥೆಗಳನ್ನು ಹೆಣೆದು ಅಪಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಎಸ್‌ಐಟಿ ನೋಟಿಸ್‌ ಜಾರಿ ಮಾಡಿದೆ.

2024ರ ಜುಲೈ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಭಾರಿ ಮಳೆಯಿಂದ ಗುಡ್ಡ ಕುಸಿದಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಶಿರೂರಿನ ಬಳಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಸಹ ಮೃತರಾಗಿದ್ದರು. ಈ ಲಾರಿಯ ಮಾಲೀಕನೆಂದೇ ಮನಾಫ್ ಗುರುತಿಸಲ್ಪಟ್ಟಿದ್ದಾರೆ.

ಜುಲೈ 11 ರಂದು ಮನಾಫ್ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಕಾಡಿನಿಂದ ಬುರುಡೆ ತಂದಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಮರಕ್ಕೆ ಸೀರೆ ಬಿಗಿದಿದ್ದ ಸ್ಥಳದ ಬಳಿಯಲ್ಲಿ ಬುರುಡೆಯನ್ನು ಕತ್ತಿ ಮೂಲಕ ಎತ್ತಿಕೊಂಡು ಬರುತ್ತಿರುವ ದೃಶ್ಯಗಳು ಸೆರೆಹಿಡಿದಿವೆ. ಈ ದೃಶ್ಯಗಳ ಹಿನ್ನೆಲೆಯಲ್ಲಿ ಬುರುಡೆ ಧರ್ಮಸ್ಥಳದ ಅರಣ್ಯ ಪ್ರದೇಶದಿಂದಲೇ ಬಂದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಬುರುಡೆ ಮ್ಯಾನ್‌ನಿಂದ ಹಿಡಿದು ಅನನ್ಯಾ ಭಟ್‌ವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚು ನಡೆಯುತ್ತಿದೆ ಎಂಬುದು ಎಸ್‌ಐಟಿ ತನಿಖೆಯಿಂದ ಪತ್ತೆ ಹಚ್ಚ ಹೊರಟಿದೆ. ಯುನೈಟೆಡ್ ಮೀಡಿಯಾ ಎಂಬ ಯೂಟ್ಯೂಬ್‌ ಚಾನಲ್‌ ನಡೆಸುತ್ತಿರುವ ಅಭಿಷೇಕ್‌ ಅವರನ್ನೂ ಎಸ್‌ಐಟಿ ಈಗಾಗಲೇ ವಿಚಾರಣೆ ನಡೆಸಿದೆ.

About The Author