ಈ ಮೊದಲೇ ನಾವು ನಿಮಗೆ ಉದ್ಯಮಕ್ಕಾಗಿ ಅನುಸರಿಸಬೇಕಾದ ಕೆಲ ಚಾಣಕ್ಯ ನಿಯಮದ ಬಗ್ಗೆ ಮಾಹಿತಿಯನ್ನ ನೀಡಿದ್ವಿ. ಇದೀಗ ದರ ಮುದುವರಿದ ಭಾಗದ ಬಗ್ಗೆಯೂ ಕೂಡ ಮಾಹಿತಿ ನೀಡಲಿದ್ದೇವೆ.

ಉದ್ಯಮ ನಡೆಸುವ ವೇಳೆ ನಿಮ್ಮ ಪ್ರಾಡಕ್ಟ್ನ ಕ್ವಾಂಟಿಟಿ ಮತ್ತು ಕ್ವಾಲಿಟಿಯನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ನಿಮ್ಮ ಉದ್ಯಮ ಉನ್ನತ ಮಟ್ಟಕ್ಕೇರುತ್ತದೆ.
ಇನ್ನು ಕಷ್ಟ ಅಥವಾ ಸುಖ ಯಾವುದೇ ಸಂದರ್ಭದಲ್ಲೂ ನಿಮ್ಮ ಧೈರ್ಯ ಸ್ಥಿರವಾಗಿರಬೇಕು. ಖುಷಿಯಾದಾಗ ಹಿಗ್ಗಿ, ಕಷ್ಟವಾದಾಗ ಕುಗ್ಗುವ ಮನಸ್ಥಿತಿ ಉದ್ಯಮಿಗೆ ಇರಬಾರದು.
ಉದ್ಯಮದ ವೇಳೆ ಹೈ ರಿಸ್ಕ್ ತೆಗೆದುಕೊಳ್ಳುವ ಸಂದರ್ಭ ಬಂದಾಗ ಯೋಚನೆ ಮಾಡದೇ ನಿರ್ಧರಿಸುವ ಸಾಮರ್ಥ್ಯ ನಿಮ್ಮಲ್ಲಿರಬೇಕು.
ಉದ್ಯಮ ಶುರು ಮಾಡುವಾ ಜೋಶ್ನಲ್ಲಿ ಚೆನ್ನಾಗಿ ದುಡ್ಡು ಸುರಿದು ದೊಡ್ಡ ದೊಡ್ಡ ಮಷಿನ್ಗಳನ್ನ ಖರೀದಿ ಮಾಡುವ ತಪ್ಪು ಮಾಡಬೇಡಿ. ಆದಷ್ಟು ಸಣ್ಣ ಮಟ್ಟದಲ್ಲೇ ಉದ್ಯಮ ಆರಂಭಿಸಿ, ಲಾಭ ಗಳಿಸಿದ ಬಳಿಕ ಮಷಿನ್ ಕೊಂಡುಕೊಳ್ಳುವ ಬಗ್ಗೆ ಯೋಚಿಸಿ. ಅಲ್ಲದೇ, ಆದಷ್ಟು ದುಡ್ಡು ಉಳಿಸುವ ಕಲೆ ಕೂಡಾ ನಿಮಗೆ ಗೊತ್ತಿರಲಿ.
ಉದ್ಯಮದಲ್ಲಿ ಆಗುವ ಖರ್ಚು ವೆಚ್ಚ ಆದಾಯಗಳ ಬಗ್ಗೆ ನಿಮಗೆ ಪಕ್ಕಾ ಮಾಹಿತಿ ಗೊತ್ತಿರಬೇಕು.
ಇನ್ನು ಉದ್ಯಮ ಮಾಡುವಾಗ ಚಿಕ್ಕ ಪುಟ್ಟ ಸಮಸ್ಯೆಗಳನ್ನ ಕಡೆಗಣಿಸಬೇಡಿ. ಚಿಕ್ಕ ಪುಟ್ಟ ಸಮಸ್ಯೆಗಳೇ ಮುಂದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.
ಹೊಸ ಕೆಲಸ ಆರಂಭಿಸುವಾಗ ಮನುಷ್ಯ ಜೋಶ್ನಲ್ಲಿರುತ್ತಾನೆ. ತುಂಬಾ ಉತ್ಸಾಹದಿಂದ ಕೆಲಸ ಮಾಡ್ತಾನೆ . ಆದ್ರೆ ದುಡ್ಡು ಗಳಿಸೋ ಭರದಲ್ಲಿ ತನ್ನ ಆರೋಗ್ಯದ ಬಳಿ ಗಮನ ಹರಿಸುವುದಿಲ್ಲ. ಆರೋಗ್ಯವೇ ಭಾಗ್ಯವಾದ ಕಾರಣ ಆರೋಗ್ಯವನ್ನ ಕಾಪಾಡಿಕೊಳ್ಳಿರಿ.
ಕೊನೆಯದಾಗಿ ನೀವು ಉದ್ಯಮದದಲ್ಲಿ ಅಸಫಲರಾಗಿದ್ದಲ್ಲಿ ದುಖ ಪಡಬೇಡಿ. ಆದ ತಪ್ಪುಗಳನ್ನ ಸರಿಪಡಿಸಿಕೊಂಡು, ಅದರಿಂದ ಹೊಸ ಪಾಠ ಕಲಿತು ಮುನ್ನಡೆಯಿರಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




