ಈ ಸಿನಿಮಾದ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಫ್ರೀ
ಪಠಾಣ್ ಚಿತ್ರ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಎದುರಿಸಿದ್ದ ದೊಡ್ಡ ಮಟ್ಟದ ವಿರೋಧವನ್ನು ಕಂಡಿದ್ದ ಸಿನಿ ಪ್ರೇಮಿಗಳು ಹಾಗೂ ಚಿತ್ರರಂಗದ ಮಂದಿ ಈ ಚಿತ್ರವೂ ಉಳಿದಿದೆ.
ಚಿತ್ರ 23 ದಿನಗಳಲ್ಲಿ 1000 ಕೋಟಿ ಕಲೆಕ್ಷನ್ ಮಾಡಿ ಸಾವಿರ ಕೋಟಿ ಕಲೆಕ್ಷನ್ ಕ್ಲಬ್ ಸೇರಿದ್ದು, ಇನ್ನೂ ಸಹ ತನ್ನ ಓಟವನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಮುಂದುವರಿಸಿದೆ. ಇನ್ನು ಪಠಾಣ್ ಚಿತ್ರವೇನೋ ಭರ್ಜರಿ ಪ್ರದರ್ಶನವನ್ನು ಕಂಡು ಅಬ್ಬರಿಸುತ್ತಿದೆ. ಆದರೆ ಈ ಚಿತ್ರ ಬಿಡುಗಡೆಯಾದ ಬಳಿಕ ತೆರೆಕಂಡ ಚಿತ್ರಗಳು ಮಾತ್ರ ಇದರ ಹೊಡೆತಕ್ಕೆ ಸಿಲುಕಿ ಸರಿಯಾದ ಪ್ರದರ್ಶನಗಳು ಸಿಗದೇ ಒದ್ದಾಡಿವೆ. ಇದೀಗ ಹಿಂದಿಯ ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸೆನನ್ ನಟನೆಯ ಶೆಹ್ಜಾದ ಚಿತ್ರ ಸಹ ಇದೇ ಪಠಾಣ್ ಚಿತ್ರದಿಂದ ಪೆಟ್ಟು ತಿಂದಿದೆ.
ಶೆಹ್ಜಾದ ಚಿತ್ರದ ಬಿಡುಗಡೆ ದಿನ ಪಠಾಣ್ ಚಿತ್ರತಂಡ ಕೇವಲ 110 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡುವ ಮೂಲಕ ಮಾಸ್ಟರ್ ಪ್ಲಾನ್ ಮಾಡಿದೆ. ಹೀಗೆ ಕಡಿಮೆ ಬೆಲೆಗೆ ಟಿಕೆಟ್ ನೀಡುವುದರಿಂದ ಸಿನಿ ರಸಿಕರು ತಮ್ಮ ಚಿತ್ರ ನೋಡಲಿದ್ದಾರೆ ಎಂಬುದು ಚಿತ್ರತಂಡದ ಯೋಜನೆಯಾಗಿದೆ.
ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಅನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿದೆ