ಹುಬ್ಬಳ್ಳಿ :ಕರ್ನಾಟಕ ಸರ್ಕಾರ ತನ್ನ ಅನುದಾನಿತ ೨೪೦ ಸರ್ಕಾರಿ ಸೀಟ್ ಗಳನ್ನು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿಗೆ ನೀಡಬೇಕು ಎಂದು ಆಗ್ರಹಿಸಿ ನಗರದ ವಿದ್ಯಾನಗರದ ಬಿವಿಬಿ ಕಾಲೇಜ್ ಬಳಿ ಭಗತ್ ಸಿಂಗ್ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿವಿಬಿ ಇಂಜಿನಿಯರಿಂಗ್ ಕಾಲೇಜು ಈ ಹಿಂದೆ ಇದ್ದ ನಿಯಮಾವಳಿಗಳನ್ನು ಪಾಲಿಸಬೇಕು, ಹು-ಧಾ ಮತ್ತು ಕರ್ನಾಟಕದ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುದಾನಿತ ಸೀಟ್ ಗಳನ್ನು ನೀಡಬೇಕು.
ಸರ್ಕಾರಿ ಅನುದಾನಿತ ಸಿಬ್ಬಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶಶಿ ಡಂಗನವರ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಗುರುರಾಜ್ ಹುಣಸಿಮರದ, ಮಂಜುನಾಥ ಹೆಬಸೂರ, ಶಂಕರಗೌಡ ಪಾಟೀಲ್, ಸೂರಜ್ ಅವರಾದಿ, ಪುನೀತ್ ಅಡಗಲ್ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.