ಬೆಂಗಳೂರು: ತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸದ್ಯದಲ್ಲೇ ನೀರಿನ ದರ ಏರಿಕೆ ಆಗಲಿದೆ ಎನ್ನುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಬೆಂಗಳೂರಿನ ಜನತೆಗೆ ನೀರಿನ ದರ ಏರಿಕೆಯಿಂದ ಮತ್ತೊಂದು ಬರೆ ಬೀಳಲಿದ್ಯಾ ಎಂಬ ಆತಂಕ ಮೂಡಿದೆ.
ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಈಗಾಗಲೇ ನೀರಿನ ದರ ಏರಿಕೆ ಬಗ್ಗೆ BWSSB ಪ್ರಸ್ತಾವನೆ ಇಟ್ಟಿದೆ. 14 ವರ್ಷದಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಆಗಿಲ್ಲ. ಈ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿ ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲ. ನೀರಿನ ಬಳಕೆಯ ವಿದ್ಯುತ್ ವೆಚ್ಚ ಸಹ ಪಾವತಿಸಲು ಸಮಸ್ಯೆ ಆಗುತ್ತಿದೆ. ಹೀಗಾಗಿ ನೀರಿನ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.
ಮೊದಲೇ ಪೆಟ್ರೋಲ್, ಡೀಸೆಲ್, ತರಕಾರಿ, ಬೆಳೆ-ಕಾಳು ಇನ್ನಿತರೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬೆಂಗಳೂರಿನ ಜನ ಈಗ ಕುಡಿಯುವ ನೀರಿಗೂ ಹೆಚ್ಚಿನ ಹಣವನ್ನು ಪಾವತಿಸಬೇಕಾ ಎಂದು ಚಿಂತಿಸುವಂತಾಗಿದೆ.
Bengaluru : ರಾಜ್ಯ ಸರ್ಕಾರದಿಂದ ಮತ್ತೊಂದು ಶಾಕ್- ಕುಡಿಯುವ ನೀರಿನ ದರ ಏರಿಕೆ!
- Advertisement -
- Advertisement -