- Advertisement -
ಕರ್ನಾಟಕ ಟಿವಿ ನವದೆಹಲಿ : ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿವೈ ರಾಘವೇಂದ್ರ ಇಂದು ದೆಹಲಿಯಲ್ಲಿ ಬಿಜೆಪಿ ನೂತನ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ರು. ಯಡಿಯೂರಪ್ಪ ಬಂಡವಾಳ ಹೂಡಿಕೆ ಸಮಾವೇಶ ಹಿನ್ನೆಲೆ ಸ್ವಿಜ್ಜರ್ಲೆಂಡ್ ಗೆ ತೆರಳೀರುವ ಹಿನ್ನೆಲೆ ವಿಜಯೇಂದ್ರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.. ಇದೇ ವೇಳೆ ಜೆ.ಪಿ ನಡ್ದಾರವರ ಸಾರಥ್ಯದಲ್ಲಿ ಪಕ್ಷ ಮತ್ತಷ್ಟು ಶಕ್ತಿಯುತವಾಗಿ, ಹೊಸ ಹುಮ್ಮಸ್ಸಿನಿಂದ ಮುನ್ನಡೆಯಲಿದೆ ಎನ್ನುವ ವಿಶ್ವಾಸ ನಮ್ಮ ಎಲ್ಲ ಕಾರ್ಯಕರ್ತರದ್ದಾಗಿದೆ ಅಂತ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ರು. ಈ ಸಮಯದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಶಂಕರಗೌಡ ಪಾಟೀಲ್ ಉಪಸ್ಥಿತರಿದ್ದರು.
- Advertisement -