Wednesday, June 18, 2025

Latest Posts

C.M Nimbannanavar : ಮಾಜಿ ಶಾಸಕ ನಿಧನ : ಸ್ವಗೃಹದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ

- Advertisement -

Hubli News : ಕಲಘಟಗಿ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ಬೆಂಗಳೂರಿನ ಭನ್ನೇರಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಎಂ. ನಿಂಬಣ್ಣವರ್ 76ನೇ ವಯಸ್ಸಿನವರಾಗಿದ್ದಾರೆ. ತೀವ್ರ ಕಾಲು‌ ನೋವಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಜುಲೈ 9 ನಿಧನ ಹೊಂದಿದ್ದಾರೆ. 

ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ :ಕಲಘಟಗಿ ಮಾಜಿ ಶಾಸಕ ಸಿ.ಎಮ್. ನಿಂಬಣ್ಣವರ್ ನಿಧನ ಹಿನ್ನೆಲೆ, ಕಲಘಟಗಿ ಪಟ್ಟಣದ ಸ್ವಗ್ರಹದಲ್ಲಿ ಸಾರ್ವಜನಿಕರಿಂದ ಅಂತಿಮ ದರ್ಶನಕ್ಕೆ ತಯಾರು ಮಾಡಲಾಗಿದೆ. ಮದ್ಯಾಹ್ನ 3 ಗಂಟೆಗೆ  ಅಂತ್ಯಸಂಸ್ಕಾರ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ  ಅಂತಿಮ ವಿಧಿವಿಧಾನ ನಡೆಯಲಿದೆ.

ರಾಜಕೀಯ ಸೇವೆ: 1995 ರಲ್ಲಿ ಬಿಜೆಪಿಗೆ ಸೇರ್ಪಡೆ ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಕಲಘಟಗಿ ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಸೇವೆ. ಈ ಅವಧಿ ಯಲ್ಲಿ ಪಕ್ಷವನ್ನು ಗ್ರಾಮ ಮಟ್ಟದಿಂದ ಸಂಘಟಿಸಿದ್ದಾರೆ. ಜನಪರ ಹೋರಾಟಗಳನ್ನು ಕೈಕೊಂಡಿದ್ದರಿಂದ ಎಲ್ಲ ವರ್ಗದ ಅವರು ರಕ್ತದೊಂದಿಗೆ ಗುರುತಿಸಿಕೊಳ್ಳುವಂತಾಯಿತು. ಈ ಕಾರ್ಯದಲ್ಲಿ ಅನೇಕರು ಇದರೊಂದಿಗೆ ಶ್ರಮ ವಹಿಸಿದ್ದಾರೆ. ಸಿ.ಎಂ. ನಿಂಬಣ್ಣವರ್ ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವುದು ಸಾಧಿಸಿದ್ದ ಸಿ.ಎಂ. ನಿಂಬಣ್ಣವರ್.2023ರಲ್ಲಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ‌ ಮಹರಾಜ್ ಸ್ವಾಮೀಜಿ

Praladh joshi:ಜೈನಮುನಿಗಳಿಗೆ ಸಾಂತ್ವಾನ ಹೇಳಿದ ಕೆಂದ್ರ ಸಚಿವರು

Amarnatha : ಕೇದರನಾಥದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಧಾರವಾಡದ ಐವರು

- Advertisement -

Latest Posts

Don't Miss