Monday, December 23, 2024

Latest Posts

ಕಾಂಗ್ರೆಸ್ ಸೇರ್ತಾರಾ ಸಿ.ಪಿ.ಯೋಗೇಶ್ವರ್…!? ಮಾಜಿ ಸಚಿವರ ಉತ್ತರವೇನು…?!

- Advertisement -

ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ವಿಚಾರವಾಗಿ ರಾಜಕೀಯ ರಂಗದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗಿದ್ದವು.ಇದಕ್ಕೆ ಇಂದು ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತೇನೆಂಬ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆಂಬುದಾಗಿ ಕೆಲವರು ಸುಖಾ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ನಂಬಿಕೆ ಹೊರಟು ಹೋಗುವಂತೆ ಮಾಡಲು ಈ ರೀತಿಯ ಯತ್ನ ಮಾಡಲಾಗುತ್ತಿದೆ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಜೀವನ ಬಿಜೆಪಿಯಲ್ಲಿ ಮಾತ್ರ ಇರುತ್ತದೆ ಎಂದರು.

ಇಂದಿನಿಂದ 3 ದಿನ ಕೊಡಗು ನಿಶಬ್ಧ…!

ಬಿಹಾರ: ಸ್ಪೀಕರ್ ಸ್ಥಾನಕ್ಕೆ ವಿಜಯ್ ಕುಮಾರ್ ಸಿನ್ಹಾ ರಾಜಿನಾಮೆ

ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ, ಮಡಿಕೇರಿ ಪ್ರತಿಭಟನೆ ಮುಂದೂಡಿಕೆ – ಸಿದ್ಧರಾಮಯ್ಯ

- Advertisement -

Latest Posts

Don't Miss