ಬೆಂಗಳೂರು: ದಕ್ಷ, ಜನಪರ ಆಡಳಿತ ಮಾಡುವುದು ಬಹಳ ಮುಖ್ಯ. ನಾಳೆ ನಾಡಿದ್ದು ವರಿಷ್ಠರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಲಾಗುವುದು. ಅವರ ಸೂಚನೆಯಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಜಾನ್, ಹಿಜಾಬ್, ಹಲಾಲ್ ವಿಷಯಗಳನ್ನು ಸೌಹಾರ್ದ ಯುತವಾಗಿ, ಕಾನೂನಾತ್ಮಕವಾಗಿ ಬಗೆಹರಿಸಲಾಗಿದೆ. ನ್ಯಾಯ ಸಮ್ಮತವಾಗಿ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯ ನೀಡಿರುವ ಆದೇಶದಂತೆ ಕ್ರಮ ವಹಿಸಿದೆ. ಅದರ ಚೌಕಟ್ಟಿನಲ್ಲಿ ದಕ್ಷವಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ವಿಧಾನಪರಿಷತ್ತು ಮತ್ತು ರಾಜ್ಯಸಭಾ ಚುನಾವಣಾ ಸದ್ಯಕ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ನಿನ್ನೆ ಕೋರ್ ಕಮಿಟಿ ಸಭೆ ನಡೆದಿದೆ. ನಾಳೆ ನಾಡಿದ್ದು ವರಿಷ್ಠರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಲಾಗುವುದು. ಅವರ ಸೂಚನೆಯಂತೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪ್ರಾರಂಭವಾಗುವುದು.
ವಿಜಯೇಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯ ರನ್ನು ಮಾಡಿ ಸಚಿವ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಇವೆಲ್ಲವೂ ವರಿಷ್ಠ ರಿಗೆ ಬಿಟ್ಟಿದ್ದು ಎಂದರು.




