ಕ್ಯಾಲಿಫೋನಿಯಾ: ನಿಮ್ಮ ಪ್ರಕಾರ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಎಷ್ಟು ಸುರಕ್ಷಿತ ಎಂಬುದು ನಿಮ್ಮ ಮೇಲಿನ ಅನುಭವಕ್ಕೆ ಬಿಟ್ಟಿದ್ದು ಆದರೆ ಕ್ಯಾಲಿಪೋರ್ನಿಯಾದ ಆರೆಂಜ್ ಕೌಂಟಿಯ ನಿವಾಸಿ ಎಥಾನ್ ನ್ಗುನ್ಲಿ ಎನ್ನುವ 22 ರ ತರುಣ ಗೂಗಲ್ ಉದ್ಯೋಗಿ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿ ಒಂದು ಕೋಟಿಗೂ ಹೆಚ್ಚಿನ ಪಿಂಚಣಿ ಹಣ ಎರಡು ನಿವೇಶನ ಜೊತೆಗೆ 67ಲಕ್ಷ ರೂ ನಗದು ಹಣವನ್ನು ಕಳೆದುಕೊಂಡಿದ್ದಾನೆ.
ಮೊದಲಿಗೆ ಪೋಷಕರ ನೆರವಿನೊಂದಿgಎ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೊಡಿಗೆ ಮಾಡಿದ್ದ ಯುವಕ ನಂತರದಲ್ಲಿ ಸಾಲದ ಹಣದಲ್ಲಿ ಕರೆನ್ಸಿಗಳನ್ನು ಖರೀದಿ ಮಾಡಿದ್ದ ಎಂದು ವರದಿಯಾಗಿದೆ. ತಾನೂ ಕಳೆದುಕೊಂಡಿರುವ ಹಣ ಮತ್ತು ತನಗಾದ ನಷ್ಟದ ಬಗ್ಗೆ ಮಾತನಾಡಿದ ಯುವಕ ನವೆಂಬರ್ 2021 ರಿಂದ ಜೂನ್ 2022 ರ ನಡುವೆ ಬರೋಬ್ಬರಿ 67 ಲಕ್ಷ ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.
ಇಷ್ಟು ಹಣ ಕಳೆದುಕೊಂಡರು ಕ್ರಿಪ್ಟೋ ಕರೆನ್ಸಿ ಮೇಲಿನ ನಂಬಿಕೆ ಕಳೆದುಕೊಳ್ಳದ ಯುವಕ ಇನ್ನು ಮುಂದಿನ ದಿನಗಳಲ್ಲಿ ಆಲ್ಟ್ ಕಾಯಿನ್ ಗಳೂ ಬಹಳ ಅಪಾಯಕಾರಿ ಇರುವುದರಿಂದ ಇನ್ನುಮುಂದೆ ಅವುಗಳಲ್ಲಿ ಹೂಡಿಕೆ ಮಾಡುವುದಿಲ್ಲ, ಹಣ ಹಾಕುವ ಮೊದಲು ಪ್ಲಾನ್ ಮಾಡಿ ಹಣ ಹೂಡುವುದಾಗಿ ತಿಳಿಸಿದ್ದಾರೆ.
Mantralaya visit: ಮಂತ್ರಾಲಯ ರಾಯರ ದರ್ಶನ ಪಡೆದ ರಿಶಿ ಸುನಕ್ ತಂದೆ ತಾಯಿ..!
America Police : ವಿದ್ಯಾರ್ಥಿನಿ ಸಾವಿಗೆ ನಗುತ್ತಿರುವ ಅಮೇರಿಕಾ ಪೊಲೀಸರು; ತನಿಖೆಗೆ ಭಾರತ ಅಗ್ರಹ..!