ರಾಜ್ಯದಲ್ಲಿ ಈಗ ಮತ್ತೊಂದು ವಿವಾದ: ಮುಸ್ಲೀಂ ಕಾರು ಬಳಸಿ ದೇವಸ್ಥಾನಕ್ಕೆ ತೆರಳದಂತೆ ಅಭಿಯಾನ

ಬೆಂಗಳೂರು: ಈಗಾಗಲೇ ಹಿಜಾಬ್, ವ್ಯಾಪಾರ ನಿಷೇಧ, ಹಲಾಲ್ ಕಟ್ ಬ್ಯಾನ್ ಬಳಿಕ, ಈಗ ಮುಸ್ಲೀಂ ಚಾಲಕರ ಕಾರುಗಳನ್ನು ಬಾಡಿಗೆ ಪಡೆದು ಹಿಂದೂಗಳು ದೇವಸ್ಥಾನಕ್ಕೆ ತೆರಳದಂತೆ ಅಭಿಯಾನ ಶುರುವಾಗಿದೆ. ಈ ಮೂಲಕ ಮುಸ್ಲೀಂ ಚಾಲಕರಿಗೆ ಈಗ ಧರ್ಮ ಸಂಕಟ ಶುರುವಾದಂತೆ ಆಗಿದೆ.

ಈ ಕುರಿತಂತೆ ಭಾರತ್ ರಕ್ಷಣಾ ವೇದಿಕೆಯಿಂದ ಅಭಿಯಾನ ಆರಂಭಿಸಲಾಗಿದ್ದು, ಮುಸ್ಲೀಂ ಕಾರು ಚಾಲಕರೊಂದಿಗೆ ಹಿಂದೂಗಳು ದೇವಾಲಯಕ್ಕೆ ತೆರಳಬೇಡಿ. ಮುಸ್ಲೀಂಮರಿಗೆ ಹಿಂದೂ ದೇವರ ಬಗ್ಗೆ ನಂಬಿಕೆ ಇಲ್ಲ. ಹೀಗೆ ನಂಬಿಕೆ ಇಲ್ಲದವರೊಂದಿಗೆ ಹಿಂದೂಗಳು ಕಾರು ಬಾಡಿಗೆ ಪಡೆದು ತೆರಳದಂತೆ ಮನವಿ ಮಾಡಲಾಗಿದೆ.

ಇದಷ್ಟೇ ಅಲ್ಲದೇ ಗೋಮಾಂಸ ತಿನ್ನುವಂತ ಮಂದಿಯೊಂದಿಗೆ ಹಿಂದೂಗಳು ದೇವಸ್ಥಾನಕ್ಕೆ ತರಳೋದು ಬೇಡ. ಹಿಂದೂ ಕಾರು ಚಾಲಕರು, ಹಿಂದೂ ಕಾರು ಮಾಲೀಕರೊಂದಿಗೆ ದೇವಸ್ಥಾನಗಳಿಗೆ ತೆರಳಿ. ಹಿಂದೂ ಚಾಲಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವಂತೆ ಅಭಿಯಾನದಲ್ಲಿ ಮನವಿ ಮಾಡಲಾಗಿದೆ.

About The Author