ಕೆನಡಾ ಸಂಸತ್ತಿನಲ್ಲಿಯೂ ಕನ್ನಡ ಕಸ್ತೂರಿ: ಸಂಸದ ಚಂದ್ರ ಆರ್ಯ ಕನ್ನಡದಲ್ಲೇ ಭಾಷಣ

ಬೆಂಗಳೂರು: ತುಮಕೂರು ಮೂಲದ ಕನ್ನಡಿಗ ಚಂದ್ರ ಆರ್ಯ, ಈಗ ಕೆನಡಾ ಸಂಸತ್ ನಲ್ಲಿ ಸಂಸದರಾಗಿದ್ದಾರೆ. ಅವರು ಕನ್ನಡಾಭಿಮಾನವನ್ನು ಕೆನಡಾದಲ್ಲಿಯೂ ಮೆರೆದಿದ್ದಾರೆ. ಸಂಸತ್ ನಲ್ಲಿ ಕನ್ನಡದಲ್ಲೇ ಮಾತನಾಡಿ, ಕನ್ನಡ ಕಸ್ತೂರಿಯ ಡಿಂಡಿಮವನ್ನು ಮೊಳಗಿಸಿದ್ದಾರೆ.

ಅವರು ಕೆನಡಾ ಸಂಸತ್ ನಲ್ಲಿ ಮಾತನಾಡಿದಂತ ಕನ್ನಡ ಭಾಷಣ ಈ ಕೆಳಗಿನಂತಿದೆ..

ನಮಸ್ಕಾರ,
ನಾನು ಇಂದು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ..

ಮಾನ್ಯ ಸಭಾಪತಿ,
ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.
ಭಾರತದ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.
ಕೆನಡಾ ದೇಶದ ಕನ್ನಡಿಗರು ೨೦೧೮ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ. ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತಿದ್ದೇನೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
ಧನ್ಯವಾದಗಳು ಸಭಾಪತಿ ಎಂದು ಮಾತನಾಡಿದ್ದಾರೆ.

About The Author