ಕೋಲಾರ: ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ 3 ಯಶಸ್ವಿಗಾಗಿ ಇಡೀ ಭಾರತವೇ ಪ್ರಾರ್ಥಿಸುತ್ತಿದೆ. ಯಾವುದೇ ಅಡೆತಡೆಗಳಿಲ್ಲದೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವಂತೆ ನಗರದ ಕೋಲಾರಮ್ಮನ ದೇವಾಲಯಕ್ಕೆ ಭೇಟಿ ನೀಡಿ ಸಂಸದ ಮುನಿಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಆಗಮಿಸಿ ಕೋಲಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇಸ್ರೋ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಕೋಲಾರಮ್ಮ ಒಳಿತು ಮಾಡಲಿ ಎಂದು ಪ್ರಾರ್ಥನೆ ಮಾಡಿದರು. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ವಿಜ್ಞಾನಿಗಳು ಹಗಲಿರಲು ಶ್ರಮಿಸುತ್ತಿದ್ದಾರೆ ಎಂದರು.
ಇನ್ನು ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಪ್ರಕಾಶ್ ರಾಜ್ ವ್ಯಂಗ್ಯ ಚಿತ್ರವನ್ನು ಹಾಕುವ ಮೂಲಕ ಚಂದ್ರಯಾನ 3 ಯಶಸ್ವಿ ಕುರಿತು ವ್ಯಂಗ್ಯ ಮಾಡಿದ್ದಾರೆ. ಅವರಿಗೆ ಭಾರತದ ಪ್ರಜೆಗಳಿಗೆ ಇರಬೇಕಾದ ಕನಿಷ್ಠ ಜ್ಙಾನವೂ ಇಲ್ಲ. ಪ್ರಕಾಶ್ ರಾಜ್ ಭಾರತದಲ್ಲಿ ಇರಲು ಅರ್ಹರಲ್ಲ. ಪ್ರಕಾಶ್ ರಾಜ್ ಗೆ ಸೂಕ್ತವಾದ ಜಾಗ ಪಾಕಿಸ್ತಾನ, ಆಫ್ಘಾನಿಸ್ತಾನ. ಅವರು ಅಲ್ಲೇ ಇರಬೇಕು. ಪ್ರಧಾನಿ ಮೋದಿ ಹಾಗೂ ಭಾರತದ ವಿಜ್ಙಾನಿಗಳ ನೇತೃತ್ವದ ಚಂದ್ರಯಾನ 3 ಯಶಸ್ವಿಯಾಗುತ್ತೆ ಎಂದು ಅವರಿಗೆ ಗೊತ್ತಾಗಿ ಅದರ ವಿರುದ್ಧ ಕಾಮೆಂಟ್ ಮಾಡಿ ಜನರ ಮುಂದೆ ಹೀರೋ ಆಗಲು ಹೋಗಿ ಜೀರೋ ಆಗಿದ್ದಾರೆ ಎಂದು ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದರು.
Cattle: ದನದ ಹಟ್ಟಿಯಲ್ಲಿ ಬೆಂಕಿ ಅವಘಡ : ಏಳು ಜಾನುವಾರುಗಳು ಸಜೀವ ದಹನ….
Sand:ಅಕ್ರಮ ಮರಳು ದಂಧೆ; ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ!




