ಮೈಸೂರು: ಮೂವರು ಯುವಕರ ನಡುವೆ ಜಗಳ ನಡೆದು ಕಾರು ಹರಿಸಿದ ಘಟನೆ ಕೆ ಬಡಾವಣೆಯಲ್ಲಿ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಘಟನೆಯಲ್ಲಿ ರಾಹುಲ್, ಪ್ರಜ್ವಲ್ ಮತ್ತು ಆನಂದ್ ಗೆ ಗಂಭೀರ ಗಾಯಗಳಾಗಿದ್ದವು. ಕ್ಷಲ್ಲಕ ಕಾರಣಕ್ಕೆ ಜಗಳವಾಡಿ ಕಾರು ಹರಿಸಲಾಗಿತ್ತು ಎಂದು ತಿಳಿದುಬಂದಿದೆ. ಪ್ರಜ್ವಲ್, ರಾಹುಲ್ ಕಾರಿನಲ್ಲಿ ಬರುತ್ತಿರುವಾಗ ,ಆರೋಪಿ ದರ್ಶನ್ ವೇಗವಾಗಿ ಬಂದು ಇಂಡಿಕೇಟರ್ ಹಾಕದೆ ಕಾರನ್ನು ತಿರುಗಿಸಿದ್ದರಿಂದ ಈ ಘಟನೆ ನಡೆದಿದೆ.
ಡಿ.17 ರಂದು ಎನ್ಎಸ್ ಯುಐ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಕಾಲೇಜುಗಳ ಬಂದ್ ಮತ್ತು ಪ್ರತಿಭಟನೆಗೆ ಕರೆ
ಪ್ರಜ್ವಲ್ ಮತ್ತು ರಾಹುಲ್ ಕಾರಿನಲ್ಲಿ ರಾತ್ರಿ ಬರುತ್ತಿದ್ದರು. ಈ ಸಮಯದಲ್ಲಿ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ದರ್ಶನ್ ಮತ್ತು ಆತನ ತಂದೆ ಇಂಡಿಕೇಟರ್ ಹಾಕದೆ ಕಾರನ್ನು ತಿರುಗಿಸಿದ್ದಾರೆ. ಇದಕ್ಕೆ ಪ್ರಜ್ವಲ್ ಮತ್ತು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ದರ್ಶನ್ ತಂದೆ, ಪ್ರಜ್ವಲ್ ಮತ್ತು ರಾಹುಲ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಇನ್ನು ದಾರಿಯಲ್ಲಿನ ಜಗಳ ನೋಡಿ ಆನಂದ್ ಎಂಬ ಯುವಕ ಬಂದಿದ್ದಾನೆ. ಜಗಳ ತೀವ್ರವಾಗಿ ಕೋಪಗೊಂಡಿದ್ದ ದರ್ಶನ್ ಪ್ರಜ್ವಲ್, ರಾಹುಲ್ ಮತ್ತು ಆನಂದ್ ಎಂಬಾತನ ಮೇಲೆ ಕಾರು ಹರಿಸಿ ಹೋಗಿದ್ದರು. ನಂತರ ಗಾಯಾಳಯಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಪೋಷಕರು ಕೃತ್ಯದ ಬಗ್ಗೆ ಸರಸ್ವತಿಪುರಂ ಠಾಣೆಗೆ ದೂರು ನೀಡಿ ಆರೋಪಿ ದರ್ಶನ್ ನನ್ನು ಬಂಧಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ದರ್ಶನ್ ನನ್ನು ಬಂಧಿಸಿದ್ದಾರೆ.
‘ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸದೆ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ’