ಹಾಸನ. ಈತ್ತೀಚಿನ ದಿನಗಳಲ್ಲಿ ಜನರು ತಮ್ಮ ಮೋಜು ಮಸ್ತಿಗಾಗಿ ಜೀವದ ಮೇಲೆ ಹಂಗು ತೊರೆದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೇಲೆ ಸಾಹಸಗಳನ್ನು ಮಾಡುತ್ತಾರೆ. ಅವರ ಸಾಹಸ, ಅವರ ವಾಹನ, ಅವರ ಜೀವನ ಇದು ಇಷ್ಟಕ್ಕೆ ಆಗಿದ್ದರೆ ಸುಮ್ಮನಿರಬಹುದು ಆದರೆ ಇದು ಸಾರ್ವಜನಿಕರಿಗೆ ತೊಂದರೆ ತರುವಂತಿದ್ದರೆ ಹೇಗಾಗಬೇಡ ಹೇಳಿ.
ಹಾಸನ ಜಿಲ್ಲೆಯ ಸಕಲೇಶಪುರದ ಹೊಸಹಳ್ಳಿ ಗುಡ್ಡದ ಸುತ್ತಮುತ್ತ ಶ್ರೀಮಂತರ ಮಕ್ಕಳ ಮೋಜು ಮಸ್ತಿ ಆಟವಾದ ಕಾರ್ ಡರ್ಟ್ ರೇಸ್ ಹಾವಳಿ ಜಾಸ್ತಿಯಾಗಿದ್ದು ಪಶ್ಚಿಮ ಘಟ್ಟದ ರಮಣಿಯ ಸ್ಥಳಗಳನ್ನು ಹಾಳುಮಾಡುತ್ತಿವೆ. ಇನ್ನು ಪ್ರವಾಸಕ್ಕೆ ಬಂದಿರುವ ಪ್ರವಾಸಿಗರು ಕಾರುಗಳಲ್ಲಿ ಡರ್ಟ್ ರೇಸ್ ಮಾಡುತ್ತಿರುವುದ ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸಿಗರು ತಮ್ಮ ಮೊಜು ಮಸ್ತಿಗಾಗಿ ಪರಿಸರವನ್ನು ಹಾಳುಮಾಡುತ್ತಿದ್ದು ಸ್ಥಳಿಯರು ಎಷ್ಟೇ ಹೇಳಿದರೂ ಅವರ ಮಾತಿಗೆ ಬೆಲೆ ಕೊಡದೆ ಪುಂಡಾಟಿಕೆ ಮಾಡುತಿದ್ದಾರೆ. ನಾವು ರಾಜಕೀಯ ಪ್ರಭಾವಿತರೆಂದು ಕೆಲವು ಪ್ರವಾಸಿಗರು ದಮ್ಕಿ ಹಾಕುತಿದ್ದಾರೆ.
ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳಿಯರು ಒತ್ತಾಯಿಸುತಿದ್ದಾರೆ.ಹೀಗೆ ಮೋಜು ಮಸ್ತಿ ಮಾಡಿಕೊಂಡು ಹೋದರೆ ಮುಂದೊಂದು ದಿನ ಪರಿಸರ ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಪರಿಸರ ಪ್ರೇಮಿಗಳ ವಾದವಾಗಿದೆ.
Tuition center: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದ ತಂದೆಗೆ ಹೃದಯಾಘಾತ
INDIA : ಇಟಲಿ ಈಸ್ಟ್ INDIA ಕಂಪನಿಯ ಘೋಷಣೆಯಾಗಿದೆ: BJP ಟ್ವಿಟ್ ಸಮರ




